ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಧೂಳಿನಿಂದ ಆವೃತವಾದ ಸೂರಲ್ಪಾಡಿ, ಕೈಕಂಬ,ಗಂಜಿಮಠ ಪರಿಸರ

ಕರಾವಳಿ

ಸೂಚನಾ ಪಲಕವಿಲ್ಲ. ಮುಂಜಾಗ್ರತಾ ಕ್ರಮ ವಹಿಸಿಲ್ಲ.ರಿಪ್ಲೆಕ್ಟರ್ ಅಳವಡಿಸಿಲ್ಲ.

ಕೈಕಂಬ:ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ- ಸಾನೂರು 169 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಈ ನಡುವೆ ಗಂಜಿಮಠ,ಸೂರಲ್ಪಾಡಿ,ಕೈಕಂಬ ಸಮೀಪದಿಂದ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಲಾಗಿದ್ದು ಪರಿಸರ ಧೂಳಿನಿಂದ ಆವೃತ್ತವಾಗಿದೆ.

ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ. ಆದರೆ ಈ ಪರಿಸರದಲ್ಲಿ ನಡೆಯುತ್ತಿರುವ ಕಾಮಗಾರಿಯ ವೇಳೆ ಧೂಳಿನಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಇದಕ್ಕೆ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಿರುತ್ತಾರೆ.

ಸದ್ರಿ ಪರಿಸರದಲ್ಲಿ ಶಾಲೆಗಳು, ಕೈಗಾರಿಕೆಗಳು, ಮನೆಗಳು,ಮಸೀದಿ, ಮದರಸ,ದೇವಸ್ಥಾನಗಳು ಇದ್ದು ರಸ್ತೆಯದ್ದಕ್ಕೂ ಮಣ್ಣು ರಾಶಿ ಹಾಕಿದ್ದು ವಾಹನಗಳ ಸಂಚಾರದಿಂದ ಗಾಳಿ ಬರುವ ವೇಳೆ ಧೂಳು ಎದ್ದು ಬರುತ್ತಿದ್ದು,ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆ ಅಗಲೀಕರಣಕ್ಕೆ ಮಣ್ಣು ಹಾಕಿದರೆ ಅದಕ್ಕೆ ನೀರು ಹಾಕಿ ಧೂಳು ಬಾರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರದ್ದು. ಈ ಪರಿಸರದಲ್ಲಿ ಅತೀ ಹೆಚ್ಚು ಸಮಸ್ಯೆ ಉಂಟಾಗಿದ್ದು ಇಲ್ಲಿ ಸರಿಯಾಗಿ ನೀರು ಸಿಂಪಡನೆ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರು.ಎಲ್ಲಾ ಕಡೆಗಳಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುವಾಗ ದೂಳು ಉಂಟಾದರೆ ಅದನ್ನು ನೀರು ಹಾಕಿ ಪರಿಹಾರ ಮಾಡುತ್ತಾರೆ. ಆದರೆ ಈ ಪರಿಸರಗಳಲ್ಲಿ ಯಾಕೆ ಹೀಗಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಗುತ್ತಿಗೆದಾರರಿಗೆ, ಇಲಾಖಾ ಇಂಜನಿಯರ್‌ಗಳಿಗೆ ಕರೆ ಮಾಡಿ ಹೇಳಿದರೆ ಧೂಳು ಬಾರದಂತೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದ್ದಾರೆ ವಿನಃ ವ್ಯವಸ್ಥೆ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.ಕೆಲವೊಮ್ಮೆ ನಾಗರಿಕರು ದೂರು ನೀಡಿದರೆ ಮಾತ್ರ ನೀರು ಹಾಕಿ ಸಮಾಧಾನ ಪಡಿಸುತ್ತಾರೆ.ಕಾಮಗಾರಿ ನಡೆಯುವ ಪರಿಸರದಲ್ಲಿ ಸೂಚನಾ ಪಲಕವಿಲ್ಲ. ಸಮರ್ಪಕವಾದ ಸುರಕ್ಷಿತ ಬ್ಯಾರಿಕೇಡ್ ಅಲವಡಿಸಿಲ್ಲ. ಮುಂಜಾಗ್ರತ ಕ್ರಮ ವಹಿಸಿಲ್ಲ. ರಿಪ್ಲೆಕ್ಟರ್ ಅಳವಡಿಸಿಲ್ಲ.ರಾತ್ರಿ ಹೊತ್ತಲ್ಲಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯಾಗುತ್ತಿದೆ. ಸಿಮೆಂಟು ಚೀಲಗಳಲ್ಲಿ ಮಣ್ಣು ತುಂಬಿಸಿ ಅಲ್ಲಲ್ಲಿ ರಸ್ತೆ ಬದಿ ಇಟ್ಟಿರುತ್ತಾರೆ.ಇದು ಸರಿಯಾದ ಕ್ರಮವಲ್ಲ.ಕಾನೂನು ರೀತಿಯಲ್ಲಿ ಕರ್ತವ್ಯ ಪಾಲಿಸುತ್ತಿಲ್ಲ.

ಈ ಪ್ರದೇಶದ ಕೈಕಂಬ ಪಟ್ಟಣವು ಜನ ಜಂಗುಳಿಯಿಂದ ಕೂಡಿರುತ್ತದೆ. ಅತ್ತಿರದಲ್ಲೇ ಶಾಲೆಯಿದ್ದು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೂಡಲೇ ಟ್ಯಾಂಕರ್ ಮೂಲಕ ನೀರು ಹಾಕಿಸುವ ವ್ಯವಸ್ಥೆಯನ್ನು ಮಾಡಬೇಕು.ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆಲ್ಲ ಪರಿಹಾರ ಕಾಣಬೇಕು. ದೂಳಿನಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ, ಕೆಲವು ಮಕ್ಕಳಿಗೆ ದೂಳಿನ ಕಾರಣಕ್ಕೆ ಅಲರ್ಜಿಯಾಗಿದೆ.ಪರಿಸರದ ನಿವಾಸಿಗಳು,ದ್ವಿಚಕ್ರ ಸವಾರರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಕೂಡಲೇ ರಸ್ತೆಗೆ ನೀರು ಹಾಕಿ ದೂಳು ಬಾರದಂತೆ ನೋಡಿಕೊಳ್ಳಬೇಕು.ದೂಳು ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ತೊಂದರೆ ಕೊಡುತ್ತದೆ. ಸಂಬಂಧಪಟ್ಟ ಅದಿಕಾರಿಗಳು ತಕ್ಷಣ ಸ್ಪಂದಿಸಬೇಕು.