ಕಾರ್ಕಳದಿಂದ ಮುತಾಲಿಕ್‌ ಸ್ಪರ್ಧೆ: ಶ್ರೀರಾಮಸೇನೆಯಿಂದಲೇ ವಿರೋಧ

ಕರಾವಳಿ

ಕರಾವಳಿಯಲ್ಲಿ ಶ್ರೀರಾಮಸೇನೆ ಸಂಘಟನೆಯೇ ಒಡೆದು ಹೋಗುತ್ತದೆ.

ಕಾರ್ಕಳದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವುದಾಗಿ ಹೇಳಿದ್ದಾರೆ. ಆದ್ರೆ ಕಾರ್ಯಕರ್ತರೊಂದಿಗೆ ಮಾತುಕತೆಯಾಡದೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮುತಾಲಿಕ್‌ ವಿರುದ್ಧ ಶ್ರೀರಾಮಸೇನೆಯವರೇ ತಿರುಗಿ ಬಿದ್ದಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮುತಾಲಿಕ್‌ಗೆ ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್, ಮುತಾಲಿಕ್‌ ಕಾರ್ಕಳದಲ್ಲಿ ಸ್ಪರ್ಧೆ ಮಾಡುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಮುತಾಲಿಕ್‌ ಸೋಲನುಭವಿಸಿದರೆ ಸಂಘಟನೆಗೆ ತೊಡಕಾಗುತ್ತದೆ. ಕರಾವಳಿಯಲ್ಲಿ ಶ್ರೀರಾಮಸೇನೆ ಸಂಘಟನೆಯೇ ಒಡೆದು ಹೋಗುತ್ತದೆ. ಹಾಗಾಗಿ ಈ ನಿರ್ಧಾರದಿಂದ ಮುತಾಲಿಕ್‌ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.