ಸುನ್ನತಿ ಪದ್ದತಿ ಜಾಮೀನು ರಹಿತ ಅಪರಾಧ ಎಂದು ಘೋಷಿಸಲು ಮನವಿ.

ರಾಷ್ಟ್ರೀಯ

ಹಲಾಲ್,ಹರಾಂ,ಜಟ್ಕಾ,ಹಿಜಾಬ್ ಮುಗಿಯಿತು,ಇದೀಗ ಸುನ್ನತಿ.

ಮಕ್ಕಳ ಮೇಲೆ ಚಿಕಿತ್ಸಕವಲ್ಲದ ಸುನ್ನತಿ ಪದ್ಧತಿಯನ್ನು ಕಾನೂನುಬಾಹಿರ ಮತ್ತು ಜಾಮೀನು ರಹಿತ ಅಪರಾಧ ಎಂದು ಘೋಷಿಸುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಲಾಗಿದೆ.ಪುರುಷ ಸುನ್ನತಿ ಪದ್ಧತಿ ನಿಷೇಧಿಸುವ ಕಾನೂನನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನಾನ್ ರಿಲಿಜಿಯಸ್ ಸಿಟಿಜನ್ಸ್ ಎಂಬ ಸಂಘಟನೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.ಸುನ್ನತಿ ಪದ್ಧತಿ ಮಕ್ಕಳ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅದು ಆರೋಪಿಸಿದೆ.

ಸುನ್ನತಿ ಇತರ ಅಪಾಯಗಳ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ವಾದಿಸಿದರು.ಮಕ್ಕಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಒಡಂಬಡಿಕೆ–1989 ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆ, ಅದರ ನಿಬಂಧನೆಗಳಿಂದಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂದು ಒತ್ತಿಹೇಳುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ