ಗಂಡಸರಿಗೂ ಬಂತು ಗರ್ಭನಿರೋಧಕ ಮಾತ್ರೆ.!

ರಾಷ್ಟ್ರೀಯ

ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಸಂದರ್ಭದಲ್ಲಿ ಅದೇಷ್ಟು ಮಂದಿ ಕಾಂಡೋಮ್‌ ಬಳಕೆಯನ್ನು ಇಷ್ಟ ಪಡುವುದಿಲ್ಲ ಅದಕ್ಕಾಗಿ ಗರ್ಭ ನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಮಹಿಳೆಯರು ಗರ್ಭ ನಿರೋಧಕಗಳನ್ನು ಸೇವನೆ ಮಾಡುವುದರಿಂದ ಸೈಟ್‌ ಎಫೆಕ್ಟ್‌ ಸಮಸ್ಯೆ ಉಂಟಾಗುವ ಭಯದಿಂದ ನಿರಾಕರಿಸುತ್ತಾರೆ.ಈ ಕಾರಣಕ್ಕಾಗಿ ಇದೀಗ ಪುರುಷರಿಗೆ ಬಂದಿದೆ ಗರ್ಭ ನಿರೋಧಕ ಮಾತ್ರೆ.ಪುರುಷರ ವೀರ್ಯವನ್ನು ಯಶಸ್ವಿಯಾಗಿ ಮಧ್ಯದಲ್ಲೇ ತಡೆದು ನಿಲ್ಲಿಸಲು ಸಾಧ್ಯ ಎಂಬ ಅಧ್ಯಯನದ ಫಲಿತಾಂಶಗಳನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಪ್ರಯೋಗವನ್ನುಇಲಿಗಳ ಮೇಲೆ ಈ ಮಾತ್ರೆಯನ್ನು ಪ್ರಯೋಗಿಸಲಾಗಿದ್ದು ಈ ಔಷಧವು ಎರಡೂವರೆ ಗಂಟೆಗಳವರೆಗೆ ವೀರ್ಯವನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ತೋರಿಸಿದೆ. ಇದರ ಪರಿಣಾಮಗಳು ಸಹ ನಿರಂತರವಾಗಿ ಕಂಡುಬಂದಿವೆ.

ಸ್ತ್ರೀ ಸಂತಾನೋತ್ಪತ್ತಿ ಪ್ರದೇಶದಲ್ಲಿ ಪ್ರವೇಶಿಸಿದ ಮೂರು ಗಂಟೆಗಳ ಅವಧಿಯ ವರೆಗೂ ಈ ನಿಷ್ಕ್ರಿಯತೆ ಮುಂದುವರಿಯಿತಂತೆ. ಅಂದರೆ ಇದೇ ಗರ್ಭಧಾರಣೆಯ ಅಪಾಯದ ಅವಧಿ. ಈ ಅವಧಿ ದಾಟಿದರೆ ಯಾವುದೇ ಅಪಾಯವಿಲ್ಲ. ಇದೊಂದು ಮಾತ್ರೆಯಂತೆ ಬಾಯಿಯಲ್ಲಿ ಸೇವಿಸಬಹುದಾದ ವಿಭಿನ್ನ ಔಷಧಿಯಾಗಿದೆ.ಇದು ಪುರುಷನ ಸೆಕ್ಸ್‌ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆಯಿದ್ದು, 52 ವಿಭಿನ್ನ ಸಂಯೋಗದ ಪ್ರಯತ್ನಗಳನ್ನು ಅವಲಂಬಿಸಿ ಮಾಹಿತಿಯನ್ನು ದಾಖಲಿಸಲಾಗಿದೆ. ಗರ್ಭನಿರೋಧಕವು 30ರಿಂದ 60 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ಆಧ್ಯಯನ ಮೂಲಕ ಮಾಹಿತಿ ಬಹಿರಂಗಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ ಮಾರುಕಟ್ಟೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ