ಬಜಪೆ ಪೊಲೀಸರ ಕಾರ್ಯಾಚರಣೆ.ಕುಖ್ಯಾತ ಕಳ್ಳರ,ದರೋಡೆಕೋರರ,ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಕರಾವಳಿ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020 ರಲ್ಲಿ ದಾಖಲಾದ ಬೈಕು ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (27) ಎಂಬಾತನನ್ನು ಬುಧವಾರ ಬೆಳಿಗ್ಗೆ ಕುಳಾಯಿ ಎಂಬಲ್ಲಿ ಬಜಪೆ ಪೊಲೀಸರು ಬಂಧಿಸಿರುತ್ತಾರೆ. ಪ್ರದೀಪ್ ಪೂಜಾರಿ ಎಂಬಾತನ ವಿರುದ್ದ ಕೊಲೆ (ಮಾಡೂರು ಯುಸೂಫ್),ಕೊಲೆಗೆ ಪ್ರಯತ್ನ, ಪೊಲೀಸರ ಮೇಲೆ ಹಲ್ಲೆ ಮತ್ತು ಬೈಕ್ ಕಳವಿಗೆ ಸಂಬಂಧಿಸಿದಂತೆ ಮಂಗಳೂರು ಮತ್ತು ದ.ಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.

ಬಜಪೆ ಪೊಲೀಸ್ ಠಾಣೆಯಲ್ಲಿ 2012 ರಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರು ಬೋಳೂರು ಕಟ್ಟೆಯ ನಿವಾಸಿ ಪ್ರಶಾಂತ್ @ ಪಚ್ಚು(39) ಎಂಬಾತನನ್ನು ದಿನಾಂಕ 15-02-2023 ರಂದು ಕುಂದಾಪುರ ಎಂಬಲ್ಲಿಂದ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಬಜಪೆ ಪೊಲೀಸ್ ಠಾಣೆಯಲ್ಲಿ 2019 ರಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿ ತಾರ್ಹಿಬ್ ಅಫ್ನಾನ್ ಪಟೇಲ್(33) ಎಂಬಾತನನ್ನು ದಿನಾಂಕ 15-02-2023 ರಂದು ಭಟ್ಕಳದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಬಜಪೆ ಪೊಲೀಸ್ ಠಾಣೆಯಲ್ಲಿ 2021 ರಲ್ಲಿ ದಾಖಲಾದ MMRD ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಡುಪಿಯ ಶಿವಳ್ಳಿಯ ನಿವಾಸಿ ಸುರೇಶ್ ಕುಮಾರ್(38) ಎಂಬಾತನನ್ನು ದಿನಾಂಕ 15-02-2023 ರಂದು ಕುಂದಾಪುರ ಎಂಬಲ್ಲಿಂದ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 4 ವಿವಿಧ ಪ್ರಕರಣಗಳಲ್ಲಿ ಘನ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೇಲಿನ 4 ಜನ ವಾರಂಟ್ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ತಂಡ ವಿಳಾಸ ಬದಲಿಸಿ ಬೇರೆ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ.

ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರ ಮಾರ್ಗದರ್ಶನದಂತೆ,DCP ಗಳಾದ ಅಂಶು ಕುಮಾರ್,ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಕಾಶ್,ಪಿ.ಎಸ್.ಐ ಪೂವಪ್ಪ, ಸಿಬ್ಬಂದಿಗಳಾದ ಗುರು ಕಾಂತಿ, ಎ.ಎಸ್.ಐ ರಾಮಣ್ಣ ಪೂಜಾರಿ, ರೋಹಿತ ಹಳೆಯಂಗಡಿ, ಜಗದೀಶ್, ರಾಜೇಶ್, ಸುಜನ್, ರಶೀದ ಶೇಖ ಮತ್ತು ಬಸವರಾಜ್ ಪಾಟೀಲ್ ಎಂಬವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.