ನರ್ಸಿಂಗ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ

ರಾಷ್ಟ್ರೀಯ

ನರ್ಸಿಂಗ್ ವಿದ್ಯಾರ್ಥಿನಿಗೆ ಒತ್ತಾಯಪೂರ್ವಕವಾಗಿ ಮದ್ಯ ಕೂಡಿಸಿ ಆಕೆಯ ಮೇಲೆ ಸ್ನೇಹಿತರೇ ಅತ್ಯಾಚಾರವೆಸಗಿದ ಘಟನೆ ಕೇರಳದ ಕ್ಯಾಲಿಕೇಟ್ ಎಂಬಲ್ಲಿ ನಡೆದಿದೆ. ಒತ್ತಾಯಪೂರ್ವಕವಾಗಿ ಆಕೆಗೆ ಮದ್ಯ ಕುಡಿಸಿದ ಸ್ನೇಹಿತರು ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿ ಖಿನ್ನತೆಗೆ ಜಾರಿದ ವಿದ್ಯಾರ್ಥಿನಿ ಕಾಲೇಜಿನಲ್ಲಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ ಆಕೆಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಆಕೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಇದಾದ ಬಳಿಕ ಕ್ಯಾಲಿಕೇಟ್ ಕಸಬಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯು ದೂರು ದಾಖಲಿಸಿದ್ದಾಳೆ.

ಎರ್ನಾಕುಲಂ ಮೂಲದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರು ಅವರಿದ್ದ ಬಾಡಿಗೆ ಮನೆಗೆ ಕರೆದಿದ್ದಾರೆ. ನಂತರ ಒತ್ತಾಯ ಪೂರ್ವಕವಾಗಿ ಆಕೆಗೆ ಮದ್ಯ ಕುಡಿಸಿದ್ದಾರೆ. ಬಳಿಕ ಅವಳು ಮದ್ಯದ ನಸೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಆಕೆಯ ಮೇಲೆ ಇಬ್ಬರೂ ನಿರಂತರ ಅತ್ಯಾಚಾರವೆಸಗಿದ್ದಾರೆ.ಘಟನೆಯ ಬಳಿಕ ಆರೋಪಿ ವಿಧ್ಯಾರ್ಥಿಗಳು ನರ್ಸಿಂಗ್ ವಿದ್ಯಾರ್ಥಿನಿಯನ್ನು ಬಿಟ್ಟು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.ಬಳಿಕ ವಿದ್ಯಾರ್ಥಿನಿಗೆ ಪ್ರಜ್ಞೆ ಬಂದಿದ್ದು, ಆಕೆ ತನ್ನ ಗೆಳತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆಕೆ ಬಂದು ಘಟನಾ ಸ್ಥಳದಿಂದ ದೌರ್ಜ್ಯನ್ಯಕ್ಕೊಳಗಾದ ಈಕೆಯನ್ನು ಕರೆದೊಯ್ದಿದ್ದಾರೆ. ಘಟನೆ ಬಗ್ಗೆ ಪ್ರಕರಣ ದೂರು ದಾಖಲಿಸಿಕೊಂಡ ಕೊಝಿಕೋಡ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.