ದಕ್ಷಿಣ ಕನ್ನಡದಲ್ಲಿ ರಣ ಬಿಸಿಲು ಮಕ್ಕಳನ್ನು ಕಾಡುತ್ತಿದೆ ಚಿಕನ್‌ ಫಾಕ್ಸ್ ಸೋಂಕು

ಕರಾವಳಿ

ರಣ ಬಿಸಿಲು ತೀವ್ರಗೊಳ್ಳುತ್ತಿದ್ದಂತೆ ಮಂಗಳೂರಿನಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಚಿಕನ್ ಫಾಕ್ಸ್‌ ಕಾಣಿಸಿಕೊಳ್ಳುತ್ತಿದೆ. ಮುಂಜಾಗ್ರತ ಕ್ರಮವಾಗಿ ಇದೆಲ್ಲದರಿಂದ ದೂರ ಇರಬೇಕಂದ್ರೆ ಶುಚಿತ್ವದ ಕಡೆಗೆ ಹೆಚ್ಚು ಗಮನ ಹರಿಸುವುದು ಒಳಿತು. ಉಸಿರಾಟದ ಮೂಲಕ, ಅನಾರೋಗ್ಯಕರ ಆಹಾರ, ನೀರು ಸೇವನೆಯಿಂದ ಮತ್ತು ಚಿಕನ್‌ ಫಾಕ್ಸ್‌ ಇರುವ ವ್ಯಕ್ತಿಯ ನೇರ ಸಂಪರ್ಕದಿಂದ ಹರಡುತ್ತದೆ. ಜ್ವರ, ಶೀತ, ತಲೆನೋವು, ಎಲ್ಲಾ ಚಿಕನ್‌ ಪಾಕ್ಸ್‌ನ ಮೊದಲು ಕಂಡು ಬರುವ ಸೂಚನೆ. ಎರಡನೇ ದಿನ ಮುಖ ಮತ್ತು ಶರೀರದಲ್ಲಿ ಸಣ್ಣ ಸೆಕೆ ಬೊಕ್ಕೆಗಳಂತೆ ಕಾಣಿಸಿಕೊಳ್ಳುತ್ತದೆ.

ಹವಾಮಾನ ಬದಲಾವಣೆ ಜತೆಗೆ ಸೆಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಮಕ್ಕಳನ್ನು ಸೇರಿದಂತೆ ದೊಡ್ಡವರಲ್ಲೂ ಚಿಕನ್‌ ಫಾಕ್ಸ್‌ ನಿಧಾನವಾಗಿ ದಕ್ಷಿಣ ಕನ್ನಡದಲ್ಲಿ ಕಾಣಿಸಿಕೊಂಡಿದೆ.ಹೆಚ್ಚಾಗಿ ಜನವರಿಯಿಂದ ಏಪ್ರಿಲ್‌- ಮೇ ತನಕನೂ ಚಿಕನ್‌ ಫಾಕ್ಸ್‌ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ. ಮುಖ್ಯವಾಗಿ ವರ್ಷವಿಡೀ ಇದ್ದರೂ ಕೂಡ ನಿರ್ದಿಷ್ಟವಾಗಿ ವರ್ಷದ ನಾಲ್ಕು ತಿಂಗಳಂತೂ ವಿಪರೀತ ಪ್ರಕರಣಗಳು ಕಾಣಿಸಿಕೊಳ್ಳುತ್ತದೆ ಎನ್ನುವುದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುವ ಮಾತು.

ಚಿಕನ್‌ ಫಾಕ್ಸ್‌ ಮಕ್ಕಳಿಗೆ ಮುಖ್ಯವಾಗಿ ಬರುತ್ತದೆ. ಆದರೆ ಮಕ್ಕಳಲ್ಲಿ ಬಂದರೆ ಕೊಂಚ ಜಾಗೃತೆ ಜತೆಗೆ ಶುಚಿತ್ವ ಕಡೆಗೆ ಗಮನಕೊಟ್ಟರೆ ಒಳ್ಳೆಯದು. ಮುಖ್ಯವಾಗಿ ಶಾಲಾ ಮಕ್ಕಳಿಗೆ ಬಂದರೆ ತಕ್ಷಣ ಸಂಬಂಧಿಸಿದ ಮಗು ರಜೆ ಹಾಕಿ ಮನೆಯಲ್ಲೆ ಇರುವುದು ಒಳ್ಳೆಯದು. ಶಾಲೆಗೆ ಬಂದರೆ ಮತ್ತಷ್ಟು ಮಕ್ಕಳಿಗೆ ಹರಡುವ ಸಾಧ್ಯತೆ ಇರುತ್ತದೆ. ಆರೋಗ್ಯ ಇಲಾಖೆ ಶಾಲಾ ಶಿಕ್ಷಣ ಇಲಾಖೆಗೂ ಈ ಕುರಿತು ಮಾಹಿತಿ ನೀಡುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಮುಖ್ಯವಾಗಿ ಈ ಸೋಂಕು ವೈರಸ್‌ ಗಾಳಿಯ ಮೂಲಕ ಹರಡುತ್ತದೆ.ಈ ಕಾಯಿಲೆ ಇರುವ ವ್ಯಕ್ತಿಗೆ ಮುಖದ ಮೇಲೆ ಮತ್ತು ಶರೀರದ ಮೇಲೆ ಗುಳ್ಳೆಗಳು 5 ರಿಂದ 6 ದಿನಗಳವರೆಗೆ ಹರಡುವ ಸಾಧ್ಯತೆ ಇದೆ. ಜ್ವರ, ಶೀತ, ತಲೆನೋವು, ಎಲ್ಲಾ ಚಿಕನ್‌ ಪಾಕ್ಸ್‌ನ ಮೊದಲು ಕಂಡುಬರುವ ಸೂಚನೆಗಳು,ಎರಡನೇ ದಿನ ಮುಖ ಮತ್ತು ಶರೀರದಲ್ಲಿ ಸಣ್ಣ ಸೆಕೆ ಬೊಕ್ಕೆಗಳಂತೆ ಕಂಡು ಬರುತ್ತದೆ. ಹೊಟ್ಟೆ, ಬೆನ್ನು, ಮುಖದ ಮೇಲೆ ಹೆಚ್ಚಿನ ಗುಳ್ಳೆಗಳು ಕಂಡುಬರುತ್ತವೆ.