ಲೇಡಿ ಡಿಟೆಕ್ಟೀವ್ ಮನೆ ಸೇರಿಕೊಂಡು ಮಾಡಿದ್ದೇನು.? ರಹಸ್ಯ ಸೋರಿಕೆಯಿಂದ ಬಂಧನವಾಗಿದ್ದೇಕೆ.!

ರಾಜ್ಯ

ಜೋಡಿ ಹತ್ಯಾ ರಹಸ್ಯದ ರೋಚಕ ಕಹಾನಿ

ಒಂದು ಮನೆಯಲ್ಲಿ ಯಜಮಾನ ಮತ್ತು ಆತನ ಮಗನ ಇಬ್ಬರ ಜೋಡಿ ಹತ್ಯೆಯಾಗಿರುತ್ತದೆ.ಕೊಲೆಗೆ ಕಾರಣ ಗೊತ್ತಗುವುದಿಲ್ಲ.ಕೊಲೆಯಾದಾಗ ಅ ಮನೆಯ ಒಡತಿ ಮನೆಯಲ್ಲಿ ಇರಲಿಲ್ಲ.ಆಕೆಯೆ ಕೊಲೆಗೈದಿದ್ದು ಎಂದು ಅಲ್ಲಿನ ಜನ ಮಾತನಾಡುತ್ತಾರೆ.ಸಂಬಂಧಿಕರು ಅಪರಾಧಿಗೆ ಶಿಕ್ಷೆಯಾಗುವಂತೆ ಪೋಲಿಸರ ಬಳಿ ನಿವೇದನೆ ಮಾಡುತ್ತಾರೆ.ಸಾಕ್ಷಾಧಾರಗಳು ಇಲ್ಲದ ಕಾರಣ ಪ್ರಕರಣ ತಿಳಿಯಾಗಿತ್ತು. ಕೊಲೆ ನಡೆದ ಮನೆಗೆ ಅನ್ಯ ಮಹಿಳೆಯೊಬ್ಬಳು ಮನೆ ಕೆಲಸಕ್ಕೆಗೆ ಸೇರಿಕೊಂಡಳು.ಕೆಲಸದ ಜೊತೆಗೆ ಮನೆ ಒಡತಿಯೊಡನೆ ಸ್ನೇಹಪರ‌ ಸಂಬಂಧವನ್ನು ಬೆಳೆಸಿಕೊಂಡು ತನ್ನ ಕೆಲಸ ನಿರ್ವಹಿಸುತ್ತಿರುವಾಗಲೇ,‌ ಒಂದಿನ ಮನೆ ಒಡತಿಗೆ ಆ ಮನೆ ಕೆಲಸದವಳ ಕೋಣೆಯಲ್ಲಿ ಸೌಂಡ್ ಡಿಟೆಕ್ಟರ್ ಹಾಗೂ ರೆಕಾರ್ಡರ್ ಸಿಕ್ಕಿದ್ದು ಇಕೆ ಯಾವುದೋ ಪೋಲಿಸ್ ಇಲಾಖೆ ಗೆ ಸಂಬಂಧಿಸಿದವಳಾಗಿರಬೇಕು ಎಂಬ ಅನುಮಾನ ಹುಟ್ಟುತ್ತದೆ. ಈಕೆಯನ್ನು ಹೊರಗಡೆ ಬಿಟ್ಟರೆ ತಾವು ಮಾಡಿದ ಕೊಲೆ ರಹಸ್ಯ ಹೊರಬರುವುದು ಎಂದು ತಿಳಿದ ಮನೆ ಒಡತಿ‌ ಕೊಡಲೇ ಆಕೆಯನ್ನು ಕೋಣೆಯೊಂದರಲ್ಲಿ‌ ಬಂಧಿಸಿ ಇವಳನ್ನು ಹತ್ಯೆ ಮಾಡಿ‌ ಮುಗಿಸಬೇಕೆಂದು ಪ್ಲ್ಯಾನ್ ಮಾಡುತ್ತಾಳೆ.

ಮನೆ ಕೆಲಸದವಳಿಗೆ ಆಕೆಯನ್ನು ಕೊಲೆ ಮಾಡುವ ವಿಷಯ ತಿಳಿದು ಚಾಕುವಿನಿಂದ ತನ್ನ ಬೆರಳೊಂದನ್ನು ಕತ್ತರಿಸಿಕೊಂಡು ಬೀಡುತ್ತಾಳೆ.‌ ಅಡುಗೆ ಮಾಡುವಾಗ ಬೆರಳಿಗೆ ಗಾಯವಾಗಿದೆ ದವಾಖಾನೆಗೆ ಹೋಗಿ ಬರುವುದಾಗಿ ಹೇಳಿ ಹೋಗುವ ಮನೆ ಕೆಲಸದವಳು, ಹೊರಗಡೆಯಿಂದ ಮನೆಯನ್ನು ಲಾಕ್ ಮಾಡಿ ಬಿಡುತ್ತಾಳೆ.

ಅಷ್ಟರಲ್ಲಿ ಹಂತಕ ಮತ್ತು ಮನೆಯೊಡತಿ‌ ಇಬ್ಬರು ಮನೆಯಲ್ಲಿ ಲಾಕ್ ಆಗಿರುವಾಗಲೇ ಪೋಲಿಸ್ ಮಾಹಿತಿ ನೀಡಿ, ಪೊಲೀಸರು ಬಂದು ಇಬ್ಬರನ್ನು ಆ‌ ಮನೆ ಕೆಲಸದವಳ‌ ಆದೇಶದ‌ ಮೆರೆಗೆ ಬಂಧಿಸುತ್ತಾರೆ. ಮುಂಬೈನಲ್ಲಿರುವ ಆಸ್ತಿಯನ್ನು ಪಡೆಯಬೇಕೆಂಬ ಹಂಬಲದಿಂದಾಗಿ ಪತ್ನಿಯಾದವಳು ತನ್ನ ಪತಿ ಹಾಗು ಮಗನನ್ನು ಹಂತಕನಿಂದ ಕೊಲೆ‌‌ ಮಾಡಿಸಿದ್ದಳು.ಹೀಗೆ ಸಾಕ್ಷ್ಯಾಧಾರ ಕುರುಹುಗಳಿಲ್ಲದೆ‌ ಉಳಿದ‌ು ಹೋಗಿದ್ದ ಈ ಪ್ರಕರಣವನ್ನು ಬಗೆಹರಿಸಲು ಮನೆ ಕೆಲಸದವಳಾಗಿ ಹೋಗಿದ್ದು ದಿಟ್ಟ ಅಧಿಕಾರಿ,ರಜನಿ ಪಂಡಿತ ಎಂಬ ಡಿಟೆಕ್ಟಿವ್ ಮಹಿಳೆ.

ಈ‌ ರಜನಿ ಪಂಡಿತ 22 ವರ್ಷಗಳ‌ ಕಾಲ ಲೇಡಿ ಡಿಟೆಕ್ಟಿವ್ ಆಗಿದ್ದವರು. ಬರೊಬ್ಬರಿ 80 ಸಾವಿರ ಕೇಸ್ ಗಳನ್ನು ಬಗೆಹರಿಸಿದ ರಜನಿ‌ ಪಂಡಿತ ಎಂಬ ಮಹಿಳೆ ಭಾರತದ ಮೊಟ್ಟ ಮೊದಲ ದಿಟ್ಟ ಡಿಟೆಕ್ಟಿವ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು‌.

ಸಿನೆಮಾಗಳಲ್ಲಿ ಹೀರೊಗಳು ವಿಲನ್ ಗಳನ್ನು ಹಿಡಿಯಲು‌ ಮುಂದಾಗುವುದನ್ನು ನೋಡುತ್ತೇವೆ.ಆದರೆ ರಜನಿ‌ ಪಂಡಿತ್ ಎಂಬ ಮಹಿಳೆ ತನ್ನ ನಿಜ‌ ಜೀವನದಲ್ಲಿ‌ ರಿಯಲ್ ಹೀರೊಯಿನ್. ಸಾಂಗ್ಲಿಯಾನಾ, ಕಿರಣ ಬೇಡಿಯವರ ಪಟ್ಟಿಗೆ ಸೇರುವ ರಜನಿ ಪಂಡಿತ್ ಬಹಳ‌ ನಿಪುಣತೆಯಿಂದ ಮಾರುವೇಷ ಹಾಕುವುದರ ಮೂಲಕ ಪ್ರಕರಣಗಳನ್ನು ಬಗೆಹರಿಸುತ್ತಿದ್ದರು. ಸಿಐಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಜನಿ,ಯಾವುದೇ ಸಣ್ಣ ಕೇಸ್ ಇರಲಿ ಬಗೆ ಹರಿಸದೆ‌ ಹಿಂದೆ ಸರಿಯುತ್ತಿರಲಿಲ್ಲ.ಮೊದಲಿನಿಂದಲು ಈ ತರಹದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ರಜನಿ ಪದವಿ ಇರುವಾಗಲೇ ಈ‌ ವಿಭಾಗದಲ್ಲಿ ಕೆಲಸ ಮಾಡಬೇಕೆಂದು ತಿರ್ಮಾನಿಸಿ ತಂದೆಗೆ ಸಹಾಯ‌‌ ಮಾಡುವುದರ ಮೂಲಕ ಈ ತರಹದ ಪ್ರಕರಣಗಳನ್ನು ವಿಲೇವಾರಿ ಮಾಡುವುದರಲ್ಲಿ ಯಶಸ್ವಿಯಾಗುತ್ತಿದ್ದರು.

ಪೋಲಿಸರಿಂದ ಬಗೆಹರಿಯದ ಅತೀವ ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದರ ಮೂಲಕ ಕೇಸ್ ಗಳನ್ನು ಬಗೆಹರಿಸಿದ ರಜನಿ,2008 ರಲ್ಲಿ ‌ರಹಸ್ಯ ಸೋರಿಕೆಯಿಂದಾಗಿ ಮಹಾರಾಷ್ಟ್ರದ ಠಾಣೆ ಪೋಲಿಸರಿಂದ ಬಂಧನಕ್ಕೆ ಒಳಗಾಗಿದ್ದರು. ಅದೆಷ್ಟೆೊ ಸವಾಲುಗಳನ್ನು ಎದುರಿಸಿದ್ದರು ಹಿಂಜರಿಯದೆ ಮುನ್ನುಗ್ಗುವ ಛಲಗಾರ್ತಿ ರಜನಿ ಪಂಡಿತ್ ಎಂಹ ಈ ಮಹಿಳೆಯ ಸಾಧನೆ ನಿಜಕ್ಕೂ ಸ್ವಾಗತಾರ್ಹ,ಮೆಚ್ಚತಕ್ಕದ್ದು.