ದಿ। ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಶಶಿ ಭೂಷಣ್ ಬಿಜೆಪಿ ಸೇರ್ಪಡೆ.!

ರಾಜ್ಯ

ಸಿದ್ದಾಪುರ ಕ್ಷೇತ್ರದಿಂದ ಕಾಗೇರಿ ಬದಲಿಗೆ ಶಶಿಭೂಷಣ್ ಹೆಗಡೆ ಬಿಜೆಪಿ ಅಭ್ಯರ್ಥಿ.

ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಹೇಳಿದ್ದ ಶಶಿಭೂಷಣ್,ಇದೀಗ ಬಿಜೆಪಿಯತ್ತ ಮುಖ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕಾಗಿವೆ.ಮಾಜಿ ಸಿಎಂ ದಿ.‌ರಾಮಕೃಷ್ಣ ಹೆಗಡೆ ಯವರ ಕುಟುಂಬದ ಕುಡಿ ಶಶಿಭೂಷಣ್ ಹೆಗಡೆ ಬಿಜೆಪಿಗೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಉತ್ತರಕನ್ನಡ ಜಿಲ್ಲೆಯ ಶಿರಸಿ ರಾಜಕೀಯ‌ ಕ್ಷೇತ್ರದಲ್ಲಿ ನಡೆಯಲಿದೆ ಮಹತ್ತರ ಬದಲಾವಣೆ.

ಮಾಜಿ ಸಿಎಂ ದಿ.‌ರಾಮಕೃಷ್ಣ ಹೆಗಡೆಯವರ ಕುಟುಂಬದ ಕುಡಿ ಶಶಿಭೂಷಣ್ ಹೆಗಡೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.ಜೆಡಿಎಸ್ ಪಕ್ಷದಿಂದ ಹೊರಬಂದಿದ್ದು ಬಿಜೆಪಿ ಸೇರಲಿರುವ ಶಶಿಭೂಷಣ್ ಹೆಗಡೆ. ಸಿದ್ಧಾಪುರ ಹಾಗೂ ಬನವಾಸಿಗೆ ಸಿಎಂ ಭೇಟಿ ಬಳಿಕ ಅಧಿಕೃತವಾಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ.ಇತ್ತೀಚೆಗೆ ಬಿಸಿಬಿಸಿ ಚರ್ಚೆ ಆಗ್ತಿರುವ ಗುಜರಾತ್ ಚುನಾವಣಾ ಮಾದರಿ ಬಗ್ಗೆ ಕಾಗೇರಿಯವರಿಗೆ ಕಸಿವಿಸಿ ಶುರುವಾಗಿದೆ. ಏಕೆಂದರೆ ಗುಜರಾತ್ ನಲ್ಲಿ ಹಿರಿಯರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಲಾಗಿದ್ದು, ಒಂದು ವೇಳೆ ಇದೇ ನಿಯಮ ರಾಜ್ಯದಲ್ಲೂ ಜಾರಿಗೆ ಬಂದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದಾಪುರ ಕ್ಷೇತ್ರದಲ್ಲಿ ಕಾಗೇರಿ ಬದಲಿಗೆ ಶಶಿಭೂಷಣ್ ಹೆಗಡೆಯವರನ್ನು ಬಿಜೆಪಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಈಗಾಗಲೇ ಶಿರಸಿಯಲ್ಲಿ ಎರಡನೇ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ಗುರುತಿಸಿಕೊಂಡಿರುವ ಶಶಿಭೂಷಣ್ ಹೆಗಡೆ. ಶಶಿಭೂಷಣ ಹೆಗಡೆಯವರನ್ನು ತನ್ನ ಪ್ರಮುಖ ದಾಳವನ್ನಾಗಿ ಬಳಸಿಕೊಳ್ಳಲಿರುವ ಬಿಜೆಪಿ.ಒಂದೋ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಅನಂತ ಕುಮಾರ್ ಹೆಗಡೆಯವರ ಬದಲು ನಿಲ್ಲಲಿರುವ ಶಶಿಭೂಷಣ್ ಹೆಗಡೆ. ಮುಂದಿನ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಈಗಾಗಲೇ ಹೇಳಿಕೊಂಡಿರುವ ಸಂಸದ ಅನಂತ ಕುಮಾರ್ ಹೆಗಡೆ. ಹೀಗಾಗಿ ಅನಂತ ಕುಮಾರ್ ಹೆಗಡೆ ಸ್ಥಾನಕ್ಕೆ ಒಂದೋ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಶಶಿಭೂಷಣ್ ಹೆಗಡೆಯವರನ್ನು ತರುವ ಸಾಧ್ಯತೆಯಿದೆ.

ಮುಂದಿನ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ನಿಂತು ಗೆದ್ದಲ್ಲಿ ಸಿಎಂ ಅಭ್ಯರ್ಥಿ ಆಗಲಿರುವ ಕಾಗೇರಿ. ಕಾಗೇರಿಗೆ ಮತ್ತೆ ಉಚ್ಚ ಸ್ಥಾನ ನೀಡಬೇಕಾಗಿರುವುದರಿಂದ ಅವರನ್ನು ಲೋಕಸಭೆ ಚುನಾವಣೆಗೆ, ಶಶಿಭೂಷಣ್ ಹೆಗಡೆಯವರನ್ನು ವಿಧಾನ ಸಭೆ ಚುನಾವಣೆಗೆ ನಿಲ್ಲಿಸಬಹುದು ಎಂದು ಮೂಲಗಳಿಂದ ಮಾಹಿತಿ ಬಂದಿದೆ.ಈ ಬಾರಿ ಕಾಗೇರಿಗೇ ಮತ್ತೆ ಟಿಕೆಟ್ ನೀಡುವುದಾದಲ್ಲಿ ಶಶಿಭೂಷಣ್ ಹೆಗಡೆಯವರನ್ನು ಲೋಕಸಭೆಗೆ ಅಭ್ಯರ್ಥಿಯನ್ನಾಗಿಸಲಿರುವ ಬಿಜೆಪಿ. ಆದರೆ ಶಶಿಭೂಷಣ್ ಹೆಗಡೆ ಶಿರಸಿ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯಾಗಿದ್ದು, ಉತ್ತಮ ಮತಬ್ಯಾಂಕ್ ಹೊಂದಿರುವುದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚು ಇದೆ.

2004ರಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಭೂಷನ್ ಹೆಗಡೆ ಕಾಂಗ್ರೆಸ್‌ನ ಮೊಹನ್ ಶೆಟ್ಟಿ ವಿರುದ್ಧ ಸೋತಿದ್ದರು, 2008ರಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಭೂಷಣ್ ಹೆಗಡೆ ಜೆಡಿಎಸ್‌ನ ದಿನಕರ ಶೆಟ್ಟಿ ವಿರುದ್ಧ ಸೋತಿದ್ದರು, ಬಳಿಕ 2013ರಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಶಿಭೂಷಣ ಹೆಗಡೆ,ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸೋತಿದ್ದರು. 2018ರಲ್ಲಿ ಮತ್ತೆ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಶಿಭೂಷಣ ಹೆಗಡೆ,ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸೋತಿದ್ದರು.ಜೆಡಿಎಸ್‌‌ನಲ್ಲಿ ಭವಿಷ್ಯ ರೂಪಿಸಲಾಗದ ಕಾರಣ ರಾಷ್ಟ್ರೀಯ ಪಕ್ಷ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.