ರಾಜ್ಯದಲ್ಲಿ ಹೆಚ್ಚಿದ H3N2 ವೈರಸ್ ಭೀತಿ; ದ.ಕ ಜಿಲ್ಲೆಯಲ್ಲೂ ವೈರಸ್ ಭೀತಿ

ರಾಜ್ಯ

ಭಾರತದಲ್ಲಿ ಹೆಚ್3ಎನ್2 ವೈರಸ್ ಆತಂಕ ಮೂಡಿಸಿದ್ದು, ಈ ಕುರಿತು ಮುಂಜಾಗೃತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ.ಈ ಕುರಿತು ಇಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎನ್ನಲಾಗಿದೆ.ದೀರ್ಘ ಕಾಲದ ಕೆಮ್ಮು ಈ ವೈರಸ್‌ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ,ವಾಂತಿ,ಗಂಟಲು ನೋವು,ಸ್ನಾಯು ಸೆಳೆತ ಜ್ವರ ಸಮಸ್ಯೆಗಳು ಕಾಡಲಿದೆ.

H3N2 ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಳವಳ ವ್ಯಕ್ತಪಡಿಸಿದೆ. ದೀರ್ಘ ಕಾಲದ ಕೆಮ್ಮು, ಜ್ವರದ ಬಗ್ಗೆ ನಿರ್ಲಕ್ಷ್ಯ ತೋರದಂತೆ ಎಚ್ಚರಿಕೆ ನೀಡಿದೆ. ನಿರಂತರ ಕೆಮ್ಮು, ಬಿಡದ ಜ್ವರಕ್ಕೆ‌ ಇನ್ಫ್ಲುಯೆಝ್ಸಾ ಎ ಸಬ್ ಟೈಪ್ ಎಚ್3ಎನ್2 ಕಾರಣ ಎಂದು ಎಚ್ಚರಿಕೆ ನೀಡಿದೆ.ಕಳೆದ ಮೂರು ತಿಂಗಳಿನಿಂದ ಭಾರತದಲ್ಲಿ ಕೆಮ್ಮು, ಜ್ವರ ಪ್ರಕರಣಗಳು ಹೆಚ್ಚಳವಾಗಿದೆ. ಹೀಗಾಗಿ ಜನ ಆಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಆಂಟಿಬಯೋಟಿಕ್ ಗಳ ಅವೈಜ್ಞಾನಿಕ ಬಳಕೆ ಮಾಡಬಾರದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಲಹೆ ನೀಡಿದೆ.