ಮೆಡಿಕಲ್ ಮಾಫಿಯ,ಮೆಡಿಕಲ್ ಕಾರ್ಪೊರೇಟ್ ಧಣಿಗಳ ವಿರುದ್ದ ಹೋರಾಟಕ್ಕಿಳಿದಿರುವ ನೌಷಾದ್ ಕುರ್ನಾಡು

Uncategorized

ನನ್ನ ಬದುಕು ನಾಶಪಡಿಸಿದ ಮೆಡಿಕಲ್ ಕಾಲೇಜು ವಿರುದ್ದ ಹೋರಾಟಕ್ಕಿಳಿದಿದ್ದೇನೆ, ಬೆಂಬಲಿಸಿ
ಜಸ್ಟಿಸ್ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಪ್ಪು ಚಿಕಿತ್ಸೆ, ಗಂಭೀರ ಕರ್ತವ್ಯ ಲೋಪ, ನಿರ್ಲಕ್ಷ್ಯದಿಂದಾಗಿ ನನ್ನ ಎಡಗಾಲನ್ನು ಕಳೆದುಕೊಂಡಿದ್ದೇನೆ.ಆಗಿರುವ ತಪ್ಪಿಗಾಗಿ ನನಗೆ ಪರಿಹಾರ ಧನ ಕೊಡುವುದಾಗಿ ಒಪ್ಪಿಕೊಂಡು ಆಸ್ಪತ್ರೆ ಆಡಳಿತ ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನನ್ನು ಅಲೆದಾಡಿಸಿ ಈಗ ನಡು ಬೀದಿಯಲ್ಲಿ ಕೈ ಬಿಟ್ಟಿದೆ. ವಿದೇಶದ ಉದ್ಯೋಗ, ಭವಿಷ್ಯವನ್ನು ಕಳೆದು ಕೊಂಡಿರುವ ನಾನೀಗ ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇನೆ.ಜನಪರ ಸಂಘಟನೆಗಳ ಬೆಂಬಲದೊಂದಿಗೆ ಮಾರ್ಚ್ 14, 2023 ರಂದು ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಎಂಬಲ್ಲಿ ಒಂದು ದಿನದ ಧರಣಿ ನಡೆಸುತ್ತಿದ್ದೇನೆ.ನನಗಾಗಿರುವ ಘೋರ ಅನ್ಯಾಯದ ವಿರುದ್ದ ನನ್ನ ಕುಟುಂಬ ನಡೆಸುವ ಹೋರಾಟದಲ್ಲಿ ನೀವುಗಳು ಭಾಗಿಯಾಗಿ ಬಲ ತುಂಬಬೇಕಾಗಿ ವಿನಂತಿಸುತ್ತಿದ್ದಾರೆ ಅನ್ಯಾಯಕ್ಕೊಳಗಾದ ನೌಷಾದ್ ಕುರ್ನಾಡು.