ದೇಶದ ಪ್ರಥಮ ತೃತೀಯ ಲಿಂಗ ದಂಪತಿಯ ಮಗುವಿಗೆ “ಜಬಿಯಾ ಸಹದ್” ಎಂದು ನಾಮಕರಣ

ರಾಷ್ಟ್ರೀಯ

ಕೇರಳದ ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹ್ಹಾದ್ ಮಗುವಿಗೆ ಜನ್ಮ ನೀಡಿದ್ದು ಇದೀಗ ದಂಪತಿ ಮಗುವಿಗೆ ನಾಮಕರಣ ಮಾಡಿದ್ದಾರೆ.ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹ್ಹಾದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ಮಗು ಹುಟ್ಟಿದ ಸುವರ್ಣ ಸಮಯವನ್ನು ಸಂಭ್ರಮಿಸಿದ್ದು ದಂಪತಿಗೆ ಹೆಣ್ಣು ಮಗು ಜನಿಸಿತ್ತು.

ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜಹ್ಹಾದ್ ಗೆ ಕಳೆದ ಫೆಬ್ರವರಿ ಎರಡರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಅಂದು ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದ ದಂಪತಿ ಇದೀಗ ಮಗುವಿಗೆ ಜಬಿಯಾ ಸಹದ್ ಎಂದು ನಾಮಕರಣ ಮಾಡಿದ್ದಾರೆ.