ಕಾಂಗ್ರೆಸ್‌ ಪಕ್ಷದ 120 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಮಾರ್ಚ್ 20ರ ಒಳಗೆ ಪ್ರಕಟ.

ರಾಜ್ಯ

ರಾಜ್ಯ ವಿಧಾನಸಭೆ ಚುನಾವಣೆಗೆ 120 ಕ್ಷೇತ್ರಗಳಿಗೆ ಇದೇ 20ರ ಒಳಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಎರಡು ದಿನಗಳಿಂದ ನಡೆಯುತ್ತಿರುವ ಸ್ಕ್ರೀನಿಂಗ್‌ ಸಮಿತಿ ಸಭೆಯಲ್ಲಿ ಈ ಕ್ಷೇತ್ರಗಳಿಗೆ ಸಂಭವನೀಯ ಒಬ್ಬ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

70 ಕ್ಷೇತ್ರಗಳಿಗೆ ಎರಡು–ಮೂರು ಅಭ್ಯರ್ಥಿಗಳಿದ್ದಾರೆ. ಆ ಕ್ಷೇತ್ರಗಳಿಗೂ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪಕ್ಷದ ವರಿಷ್ಠರಿಗೆ ನೀಡಲಿದೆ. ಪಟ್ಟಿಗೆ ಕೇಂದ್ರ ಚುನಾವಣಾ ಸಮಿತಿ ಅಂತಿಮ ಮುದ್ರೆ ಒತ್ತಲಿದೆ. ಆದರೆ, ಕೇಂದ್ರ ಚುನಾವಣಾ ಸಮಿತಿ ಇನ್ನೂ ರಚನೆ ಆಗಿಲ್ಲ. ಸದ್ಯದಲ್ಲೇ ಈ ಸಮಿತಿ ರಚನೆಯಾಗಲಿದೆ ಎಂದೂ ಮೂಲಗಳು ತಿಳಿಸಿವೆ.