ಅರೆನಗ್ನ ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್

ರಾಜ್ಯ

ಪೊಲೀಸರ ಕಾರ್ಯಾಚರಣೆ, ಇಬ್ಬರು ಮಹಿಳೆಯರು ಸೇರಿ 6 ಮಂದಿಯ ಬಂಧನ

ಚೆಂದುಲ್ಲಿ ಚೆಲುವೆಯರನ್ನು ಮುಂದಿಟ್ಟುಕೊಂಡು ಅಮಾಯಕರನ್ನು ಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್​​​ ಗ್ಯಾಂಗ್​ವೊಂದನ್ನು ಬೆಂಗಳೂರು ಪೊಲೀಸರು ಬಲೆಗೆ ಕೆಡವಿದ್ದಾರೆ. ಯುವತಿಯರ ಅರೆ ನಗ್ನ ಫೋಟೋಗಳನ್ನು ಕಳುಹಿಸಿ ಅಮಾಯಕರನ್ನು ಕರೆಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಬೇಗೂರು ಪೊಲೀಸರು ಕಾರ್ಯಚರಣೆ ನಡೆಸಿ ಬಂಧನ ಮಾಡಿದ್ದಾರೆ. ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಬಡೋ ಅಂಡ್ ಟ್ಯಾಗಡ್ ವೆಬ್ ಸೈಟ್ ಮೂಲಕ ಗಿರಾಕಿಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.

ರೂಮ್​​ಗೆ ಬರುತ್ತಿದ್ದ ಗ್ರಾಹಕರನ್ನು ಅರೆ ನಗ್ನಗೊಳಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆ ಬಳಿಕ ವಿಡಿಯೋ ಮುಂದಿಟ್ಟುಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಇದೇ ರೀತಿ ಬೇಗೂರು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ವ್ಯಕ್ತಿಯೊಬ್ಬರನ್ನು ಟ್ರ್ಯಾಪ್​ ಮಾಡಿದ್ದರು. ವಿಡಿಯೋ ಮಾಡಿಕೊಂಡು 10 ಲಕ್ಷ ರೂಪಾಯಿಗೆ ಆರೋಪಿಗಳು ಡಿಮ್ಯಾಂಡ್ ಮಾಡಿದ್ದರಂತೆ.ಇದರಿಂದ ದಿಕ್ಕುತೋಚದಂತಹ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದು, ದೂರು ಪಡೆದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಗೆ 3 ಲಕ್ಷ ಹಣ ನೀಡುತ್ತೇವೆ ಅಂತ ಹೇಳಿ ಟ್ರ್ಯಾಪ್​ ಮಾಡಿ ಕರೆಯಿಸಿಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿ, ಬಳಿಕ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗನ್ನೇ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.