ಮಹಾಲಕ್ಷ್ಮಿ ಕೋಪರೇಟಿವ್‌ ಸೊಸೈಟಿಯ ವ್ಯವಸ್ಥಾಪಕ ಆತ್ಮಹತ್ಯೆ; ಯಶ್ಫಾಲ್‌ ಸುವರ್ಣ ಸೇರಿದಂತೆ ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

ಕರಾವಳಿ

ಮಹಾಲಕ್ಷ್ಮಿ ಕೋಪರೇಟಿವ್‌ ಸೊಸೈಟಿಯ ವ್ಯವಸ್ಥಾಪಕರಾದ ಸುಬ್ಬಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮೃತ ಸುಬ್ಬಣ್ಣನವರ ಸಹೋದರ ಸುರೇಶ್‌ ಅವರು ನೀಡಿದ ದೂರಿನಂತೆ ಬ್ಯಾಂಕಿನ ಆಧ್ಯಕ್ಷರಾದ ಯಶ್ಫಾಲ್‌ ಸುವರ್ಣ, ಎಮ್.ಡಿ ಜಗದೀಶ್‌ ಸುವರ್ಣ, ಮಾಜಿ ಎಮ್.ಡಿ ಜಗದೀಶ್‌ ಗಂಗೊಳ್ಳಿ,ಮ್ಯಾನೇಜರ್‌ ಸಾರಿಕಾ,ಸಾಲಗಾರ ರಿಯಾಝ್‌ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಅಣ್ಣನ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯವರ ಅಸಹಕಾರ ಮತ್ತು ರಿಯಾಜ್ ಎಂಬ ವ್ಯಕ್ತಿಯ ಮೋಸದ ನಡವಳಿಕೆ ಕಾರಣ ವಾಗಿರುತ್ತದೆ. ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್ ಎ ಸುವರ್ಣ, ಎಂ ಡಿ ಜಗದೀಶ್,ಮೊಗವೀರ, ಮಾಜಿ ಎಂ.ಡಿ.ಜೆ ಕೆ ಸೀನ ಗಂಗೊಳ್ಳಿ,, ಮಾನೇಜರ್ ಸಾರಿಕಾ ಸಾಲಗಾರ ರಿಯಾಜ್ ಇವರುಗಳು ನೀಡಿದ ಮಾನಸಿಕ ಒತ್ತಡ ಕಿರುಕುಳ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬೇಕೆಂದು ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಸಿರುತ್ತಾರೆ.

ಸುಬ್ಬಣ್ಣನವರ ಸಾವಿನಲ್ಲಿ ಪಿರ್ಯಾದಿದಾರ ಸಹೋದರ ಸುರೇಶ್ ರವರಿಗೆ ಸಂಶಯವಿದ್ದುದರಿಂದ ಆಡಳಿತ ಮಂಡಳಿ ಮತ್ತು ಸಾಲಗಾರ ರಿಯಾಜ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಕುರಿತು ಮಲ್ಪೆ ಠಾಣೆಯಲ್ಲಿ ಎಸ್ಸಿ ಎಸ್ಟಿ ಕಾಯಿದೆಯ 3(2) ಮತ್ತು ಐಪಿಸಿ 306 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.