ಬಿಜೆಪಿಗೆ ಸೋಮಣ್ಣ ಗುಡ್ ಬೈ ಹೇಳಲಿದ್ದಾರೆ ಸೋಮಣ್ಣ.!

ರಾಜ್ಯ

ಬಿಜೆಪಿಯಲ್ಲಿ ಮೂಲೆಗುಂಪು ಮಾಡಿದ್ದಾರೆಂದು ಬೇಸರ,ಸೋಮಣ್ಣ ಬಿಜೆಪಿ ತ್ಯಜಿಸಲು ಯೋಜನೆ.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಸೋಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಇಬ್ಬರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಬೆಂಗಳೂರು ನಗರದ 4-5 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಲಿಂಗಾಯತ ಸಮುದಾಯದ ಮುಖಂಡ ವಿ.ಸೋಮಣ್ಣ, ಗೋವಿಂದರಾಜನಗರ ಶಾಸಕ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಚರ್ಚಿಸಲಾಗಿದ್ದು, ಸೋಮಣ್ಣ ಸೇರ್ಪಡೆಗೆ ತಕ್ಷಣ ಒಪ್ಪಿಗೆ ನೀಡಿದ್ದಾರೆ.ಎಂದು ಬಲ್ಲ ಮೂಲಗಳಿಂದ ಮಾಹಿತಿಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸದ ನಂತರ, ಅಂದರೆ ಮಾರ್ಚ್ ಒಳಗೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಮಣ್ಣಗೆ ಗೋವಿಂದರಾಜನಗರ ಅಥವಾ ರಾಜಾಜಿನಗರ ಕ್ಷೇತ್ರವನ್ನು ನೀಡಲಿದೆ. ಅವರ ಪುತ್ರ ಅರುಣ್ ಸೋಮಣ್ಣ ಅವರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಬಿಜೆಪಿಯಿಂದ ಚಾಮರಾಜನಗರ ಜಿಲ್ಲೆಯ ಹನೂರು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಅಥವಾ ತುಮಕೂರಿನ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ, ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸೀಟು ಸಿಗುವ ಸಾಧ್ಯತೆಯಿಲ್ಲದ ಕಾರಣ ಕಾಂಗ್ರೆಸ್ ಗೆ ಸೇರುವ ನಿರೀಕ್ಷೆಯಿದೆ. ಕಾಂಗ್ರೆಸ್ ನಲ್ಲಿ ಸೋಮಣ್ಣ ಮತ್ತು ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.

ಬಿಜೆಪಿಯಲ್ಲಿ ತಮ್ಮ ಮಗನ ರಾಜಕೀಯ ಭವಿಷ್ಯವನ್ನು ಮೂಲೆಗುಂಪು ಮಾಡಿದ್ದಾರೆಂದು ಬೇಸರಗೊಂಡಿರುವ ಸೋಮಣ್ಣ ಬಿಜೆಪಿ ತ್ಯಜಿಸಲು ಯೋಜಿಸಿದ್ದಾರೆ. ಕೊನೆಯ ಪ್ರಯತ್ನವಾಗಿ ಬಿ ಎಸ್ ಯಡಿಯೂರಪ್ಪ ಸೋಮಣ್ಣ ಅವರನ್ನು ಬಿಜೆಪಿಯೊಳಗೆ ಉಳಿಸಿಕೊಳ್ಳಲು ಮನವೊಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ