ರೌಡಿ ಶೀಟರ್ ರವಿ ಎದುರು ಕೈ ಮುಗಿದು ನಿಂತ ಮೋದಿ:ಕಾಂಗ್ರೆಸ್ ವಾಗ್ದಾಳಿ

ರಾಷ್ಟ್ರೀಯ

ರಾತ್ರಿ ಬೆಳಗಾಗುವುದರೊಳಗೆ ಉರಿಗೌಡ, ದೊಡ್ಡನಂಜೇಗೌಡ ಹೆಸರಿನ ಮಹಾದ್ವಾರ ಮಾಯ.!

ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.ಈ ಕುರಿತ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಆರೋಪಿಸಿದೆ.

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ಪೈಟರ್ ರವಿ ಎಂಬ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ.ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ.ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಟ್ವೀಟ್ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ ರಾತ್ರೋ ರಾತ್ರಿ ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ ತೆರವು ಕುರಿತಂತೆಯೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ ಸಿಟಿ ರವಿ ಅವರನ್ನು ವಿಚಾರಿಸಿ.! ರಾಜ್ಯ ಬಿಜೆಪಿ ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ? ಎಂದು ಪ್ರಶ್ನಿಸಿದೆ.
ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಬಿಜೆಪಿ ಕ್ಯಾರೇ ಅನ್ನಲಿಲ್ಲ.ಈಗ ಅದೇ ಮಂಡ್ಯದಲ್ಲಿ ಮೋದಿ ಕರೆಸಿ ಬರಿಗೈ ಬೀಸಿದರೆ ಜನ ಕೇಳುವರೇ.? ರಾಜ್ಯ ನಾಯಕರ ನಂತರ ಮೋದಿಗೂ ಖಾಲಿ ಕುರ್ಚಿಗಳ ದರ್ಶನವಾಗಿದೆ, ಹಣ ಕೊಟ್ಟರೂ ಬಾರದ ಜನ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದಾರೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೇಸ್ ವ್ಯಂಗ್ಯವಾಡಿದೆ

ಉರಿಗೌಡ ಮತ್ತು ದೊಡ್ಡನಂಜೇಗೌಡ ಕಾಲ್ಪನಿಕ ವ್ಯಕ್ತಿಗಳಾಗಿದ್ದು, ನಿಜ ವ್ಯಕ್ತಿಗಳಂತೆ ಬಣ್ಣಿಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪುವನ್ನು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂದು ಹಲವರು ಉರಿಗೌಡ, ದೊಡ್ಡನಂಜೇಗೌಡ ಹೆಸರಿನ ಮಹಾದ್ವಾರಕ್ಕೆ ವಿರೊಧ ವ್ಯಕ್ತಪಡಿಸಿದ್ದರು.ಅದಕ್ಕಾಗಿ ಮಹಾದ್ವಾರದ ಹೆಸರು ಬದಲಾವಣೆ ಮಾಡಿರುವುದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.