ಮುಗ್ಗರಿಸಿದ ಬಿಜೆಪಿಗೆ ಮುಜುಗರ.! ಮುನಿದ ಮಂಡ್ಯದ ಜನತೆ.

ರಾಜ್ಯ

ಉರಿಗೌಡ,ದೊಡ್ಡ ನಂಜೇಗೌಡ ಹೆಸರಲ್ಲಿ ಒಕ್ಕಲಿಗರಿಗೆ ಕೊಲೆ ಪಾತಕ ಪಟ್ಟ.! ರೌಡಿ ರವಿಗೆ ಕೈಮುಗಿದ ಮೋದಿ.!

ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿಯ ಸ್ವಾಗತ, ರಸ್ತೆಯ ಇಕ್ಕೆಲಗಳಲ್ಲಿ ಜನರನ್ನು ನಿಲ್ಲಿಸಿ ರೋಡ್​ ಶೋ, ಜನರಿಂದ ಪುಷ್ಪವೃಷ್ಠಿ ಮಾಡಿಸಿ,ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿಸಿದರು.ಜನರು ಕೂಡ ಉಲ್ಲಾಸದಿಂದಲೇ ಬಾಗಿಯಾಗಿದ್ದರು. ಇದೊಂದು ಮಹತ್ವಪೂರ್ಣ ಕಾರ್ಯಕ್ರಮ.ಆದರೂ ಬಿಜೆಪಿ ಕೆಲವೊಂದು ತಪ್ಪುಗಳನ್ನು ಮಾಡಿ ಮುಜುಗರಕ್ಕೂ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣ ಆಯಿತು. ಅತಿಹೆಚ್ಚು ಒಕ್ಕಲಿಗ ಸಮುದಾಯದ ಜನರು ವಾಸ ಮಾಡುವ ಜಿಲ್ಲೆ ಮಂಡ್ಯ.ಇಲ್ಲಿನ ಜನ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಬಿಜೆಪಿ ರಾಜಕೀಯ ಕಾರಣಕ್ಕಾಗಿ ಇತಿಹಾಸದಲ್ಲೇ ಇಲ್ಲದ ಉರಿಗೌಡ ಹಾಗು ದೊಡ್ಡ ನಂಜೇಗೌಡ ಮಹಾದ್ವಾರ ಎಂದು ಕಟೌಟ್​​ ಹಾಕಿತ್ತು. ಮಾತ್ರವಲ್ಲ ಟಿಪ್ಪುವನ್ನು ಕೊಂದವರು ಒಕ್ಕಲಿಗರು ಎಂದು ಸುಳ್ಳು ಭಾಷಣ ಮಾಡಿ,ಒಕ್ಕಲಿಗರ ಹೆಸರಲ್ಲಿ ಮಹಾದ್ವಾರ ನಿರ್ಮಾಣ ಮಾಡಿ, ಒಕ್ಕಲಿಗರಿಗೆ ಕೊಲೆಪಾತಕ ಪಟ್ಟ ಕಟ್ಟಿದ್ದಕ್ಕೆ ಜನ ಸಿಟ್ಟಿಗೆದ್ದಿದ್ದರು. ತಪ್ಪಿನ ಅರಿವಾಗಿ. ರಾತ್ರೋರಾತ್ರಿ ಬಾಲಗಂಗಾಧರನಾಥ ಸ್ವಾಮಿ ಮಹಾದ್ವಾರ ಎಂದು ಹೆಸರು ಬದಲಾವಣೆಯಾಯಿತು.ಇದರಲ್ಲೂ ಬಿಜೆಪಿಗೆ ಇರುಸು ಮುರುಸು ಉಂಟಾಯಿತು.

ಪ್ರಧಾನಿ ನರೇಂದ್ರ ಮೋದಿ ಓರ್ವ ರೌಡಿ ಶೀಟರ್​, ಕ್ರಿಕೆಟ್​ ಬುಕ್ಕಿ, ಫೈಟರ್​ ರವಿಗೆ ಕೈ ಮುಗಿದಿದ್ದಾರೆ. ನಾಗಮಂಗಲ ಟಿಕೆಟ್​ ಆಕಾಂಕ್ಷಿ ರೌಡಿ ಫೈಟರ್​ ರವಿ,ಮೋದಿಗೆ ನಮಸ್ಕರಿಸಿದ್ದಾರೆ.ಅದಕ್ಕೆ ಪ್ರತಿಯಾಗಿ ಮೋದಿ ಕೂಡ ರೌಡಿ ಶೀಟರ್ ರವಿಗೆ ನಮಸ್ಕರಿಸಿದ್ದಾರೆ.ಭಾರತೀಯ ಜನತಾ ಪಾರ್ಟಿ ಫೈಟರ್​ ರವಿ ಪಕ್ಷ ಸೇರ್ಪಡೆಯನ್ನು ಈ ಹಿಂದೆ ರದ್ದು ಮಾಡಿದ್ದೇವೆ ಎಂದು ಘಂಟಾಗೋಷವಾಗಿ ಷೋಷಣೆ ಮಾಡಿತ್ತು. ಆದರೆ ಇದೀಗ ಪ್ರಧಾನಿ ಸ್ವಾಗತಕ್ಕೇ ಫೈಟರ್​ ರವಿಯನ್ನು ಮುಂದೆ ನಿಲ್ಲಿಸುವ ಮೂಲಕ ಯಾವ ಸಂದೇಶ ಕೊಟ್ಟಿದೆ ಎನ್ನುವುದು ಜನರ ಪ್ರಶ್ನೆಯಾಗಿದೆ.? ಇದನ್ನೇ ಕಾಂಗ್ರೆಸ್​ ಟ್ವೀಟ್​ ಮಾಡಿ ಕಿಡಿಕಾರಿದ್ದು.ನಿರ್ಲಜ್ಜ ರಾಜಕೀಯ ಪಕ್ಷ.ನರೇಂದ್ರ ಮೋದಿಯಿಂದ ಪ್ರಧಾನಿ ಹುದ್ದೆಗೆ ಕಳಂಕ ಬಂದಿದೆ ಎಂದು ಟ್ವೀಟ್ ಮಾಡಿದೆ.

ಲಕ್ಷ,ಲಕ್ಷ ಜನರ ಬೆಂಬಲವಿದೆ ಎಂದು ತೋರಿಸಲು ಹಣ ಕೊಟ್ಟು, ವಾಹನಗಳ ಮೂಲಕ ಜನರನ್ನು ಕರೆದುಕೊಂಡು ಬಂದು, ಆ ಬಳಿಕ ಹಣ ಕೊಡದಿದ್ದರೆ ಜನ ತಿರುಗಿ ಬೀಳುತ್ತಾರೆ..! ಇದೇ ಘಟನೆ ಮಂಡ್ಯದ ಮೋದಿ ಸಮಾವೇಶದಲ್ಲಿ ನಡೆದಿದೆ.ಎರಡು ಬಸ್​ಗಳಲ್ಲಿ ಬಂದಿದ್ದ ಜನರಿಗೆ ಹಣ ಕೊಟ್ಟಿದ್ದಾರೆ, ಇನ್ನೊಂದು ಬಸ್​ನಲ್ಲಿ ಬಂದಿದ್ದ ಜನರಿಗೆ ಹಣ ಕೊಟ್ಟಿಲ್ಲ ಎಂದು ಹೊಸಗಾವಿ ಗ್ರಾಮ ಪಂಚಾಯ್ತಿ ಜನರು ಕಿಡಿಕಾರಿದ್ದಾರೆ. 300 ರೂಪಾಯಿ ಕೊಡುತ್ತೇವೆ ಎಂದು ಹೇಳಿ ಕರೆದುಕೊಂಡು ಬರಲಾಗಿತ್ತು. ಆದರೆ ಹಣ ಕೊಡದೆ ಮೋಸ ಮಾಡಿದ್ದಾರೆ ಎನ್ನುವ ವೀಡಿಯೋ ಒಂದು ವೈರಲ್​ ಆಗಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಬಿಜೆಪಿಯವರು ಹೀಗೆ ಮಾಡಿದ್ದು ಮಾತ್ರ ನಾಚಿಕೆಗೇಡು ಮಾತ್ರವಲ್ಲ ಬಿಜೆಪಿಗೂ ಮುಜುಗರ ತಂದಿದೆ.ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗಲೇ ಖಾಲಿ ಕುರ್ಚಿಗಳು ಕಾಣಿಸಿಕೊಂಡಿದೆ. ಪ್ರಧಾನಿ ಭಾಷಣಕ್ಕೆ ಜನರ ಕೊರತೆ ಎದ್ದು ಕಾಣಿಸಿದೆ.ಹಣ ಕೊಟ್ಟು ಜನರನ್ನು ಕರೆ ತಂದು ಇಂತಹ ಗತಿ ಬರಬಾರದಿತ್ತು ಬಿಜೆಪಿಗೆ,ಎಂದು ಕಾಂಗ್ರೇಸ್ ಹಾಸ್ಯ ಮಾಡಿದೆ.