ಮಾರ್ಚ್ 18 ಮತ್ತು 19 ರಂದು ನವೀಕೃತಗೊಂಡ ಮೂಲರಪಟ್ನ ಮುಹೀಯುದ್ದೀನ್ ಜುಮಾ ಮಸೀದಿ ಲೋಕಾರ್ಪಣೆಗೊಳ್ಳಲಿದೆ

ಕರಾವಳಿ

ಇತ್ತೀಚೆಗೆ ನವೀಕೃತಗೊಂಡ ಮುಹೀಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ಉದ್ಘಾಟನೆ ಕಾರ್ಯಕ್ರಮವು ಬಹುಮಾನ್ಯರಾದ ಶೈಖುನಾ,ಸಯ್ಯಿದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಗಲ್(ಅಧ್ಯಕ್ಷರು ಸಮಸ್ತ ಕೇರಳ ಜಮೀಯತ್ತುಲ್ ಉಲಮಾ)ಇವರ ನೇತ್ರತ್ವದಲ್ಲಿ ಮಾರ್ಚ್ 19ರಂದು ಲುಹರ್ ನಮಾಝಿನ ಸಮಯದಲ್ಲಿ ನಡೆಯಲಿರುವುದು ಹಾಗೂ ಎರಡು ದಿನಗಳ ಧಾರ್ಮಿಕ ಮತ ಪ್ರಭಾಷನ ಕಾರ್ಯಕ್ರಮವು ಮುಹಿಯುದ್ದೀನ್ ಜುಮಾ ಮಸೀದಿ,ಮೂಲರಪಟ್ಟ ಇದರ ವಠಾರದಲ್ಲಿ ಜರಗಲಿರುವುದು ಎಂದು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಎಂ.ಬಿ.ಅಶ್ರಫ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಸರಿ-ಸುಮಾರು 800 ವರ್ಷಗಳ ಕಾಲದ ಚರಿತ್ರೆಯ ಇತಿಹಾಸವಿರುವ,ಅತೀ ಪುರಾತನ ಮಸೀದಿಯನ್ನು ಇತ್ತೀಚೆಗೆ ಸುಸಜ್ಜಿತವಾಗಿ ನವೀಕೃತಗೊಳಿಸಿ ಉಲಮಾ,ಉಮರಾಗಳ ಮುಂದಾಳತ್ವದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿರುವುದು. ಜಮಾತ್ ಭಾಂದವರ ಹಾಗೂ ಸರ್ವ ಧರ್ಮೀಯರ ಸಹಕಾರದೊಂದಿಗೆ ಸುಸಜ್ಜಿತವಾದ ಮಸೀದಿ ನಿರ್ಮಾಣಗೊಂಡು,ಒಳಗಡೆ ವಿಶಿಷ್ಟ ಶೈಲಿಯ ಮರದ ಕೆತ್ತನೆಯೊಂದಿಗೆ, ವಿಶಾಲವಾದ ಹವಾ ನಿಯಂತ್ರಿತ ಸುಸಜ್ಜಿತವಾದ ಮಸೀದಿ ನಿರ್ಮಾಣಗೊಂಡಿದೆ.

ವಿಶೇಷವಾಗಿ ಶನಿವಾರ ಮಧ್ಯಾಹ್ನ 2 ಗಂಟೆ ಸಮಯದಿಂದ ಮಗ್ರಿಬ್ ನಮಾಝ್ ವರೆಗೆ ಮಹಿಳೆಯರಿಗೆ ನಮ್ಮೂರಿನ ಮುಹಿಯುದ್ದೀನ್ ಜುಮಾ ಮಸೀದಿಯನ್ನು ನೋಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿರುತ್ತಾರೆ.

ಮಾರ್ಚ್ 21 ರಂದು ಮಗ್ರಿಬ್ ನಮಾಝಿನ ನಂತರ ‘ನೂರ್ ಎ ಅಜೇರ್’ ಎಂಬ ಧಾರ್ಮಿಕ ಕಾರ್ಯಕ್ರಮವು ವಳಿಯುದ್ದೀನ್ ಫೈಝೀ ರವರ ನೇತ್ರತ್ವದಲ್ಲಿ ನಡೆಯಲಿರುವುದು ಎಂದು ಮಾಹಿತಿ ನೀಡಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಶಿಹಾಬುದ್ದೀನ್, ಅಬ್ದುಲ್ ಹಕೀಂ, ಹಿದಾಯುತ್ತುಲ್ಲಾ, ಹಂಝು, ಮಹಮ್ಮದ್ ಸಾಲಿ ಮತ್ತಿತರರು ಉಪಸ್ಥಿತರಿದ್ದರು.