ಅಮೃತಪಾಲ್ ಸಿಂಗ್ ಗ್ರಾಮ ಸೀಲ್.ಸ್ವಯಂ ಘೋಷಿತ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಬಂಧನ.?

ರಾಷ್ಟ್ರೀಯ

ಸ್ವಯಂ ಘೋಷಿತ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ರಾಜ್ಯದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದೆ ಬೆನ್ನಲ್ಲೆ ಪಂಜಾಬಿನ ಹಲವು ಜಿಲ್ಲೆಗಳಲ್ಲಿ ಸೆಕ್ಷನ್ 144 ಹೇರಲಾಗಿದೆ.ಖಲಿಸ್ತಾನ್ ಬೆಂಬಲಿಗ ಅಮೃತಪಾಲ್ ಸಿಂಗ್ ಅವರ ಗ್ರಾಮ ಜಲ್ಲುಪುರ್ ಖೇಡಾವನ್ನು ಪೊಲೀಸರು ಸೀಲ್ ಮಾಡಿದ್ದಾರೆ.

ಪಂಜಾಬ್ ಪೊಲೀಸರು ಕೂಡ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಇದರ ಜೊತೆಗೆ ಪಂಜಾಬ್-ಹರಿಯಾಣ ಗಡಿಯಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಖಲಿಸ್ತಾನಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಜಲಂಧರ್‌ನ ನಕೋದರ್ ಬಳಿ ಬಂಧಿಸಲಾಗಿದೆ. ಪಂಜಾಬ್ ಪೊಲೀಸರು ಇದುವರೆಗೆ ಸಿಂಗ್ ಅನ್ನು ಬಂಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಲ್ಲ.