ಬಜಪೆ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಹಲವಾರು ಬಾರಿ ವಿಳಾಸ ಬದಲಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಜಬ್ಬಾರ್ @ಪೈರೋಜ್ ನನ್ನು ಬಜಪೆ ಠಾಣಾ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಬಂಟ್ವಾಳದಲ್ಲಿ, ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತನ ಮೇಲೆ ಮಂಗಳೂರು ನಗರದ ವಿವಿಧ ಠಾಣೆಗಳಾದ ಪಾಂಡೇಶ್ವರ, ಉಳ್ಳಾಲ, ಮಂಗಳೂರು ನಗರ, ಎಸ್.ಸಿ.ಪಿ.ಎಸ್, ಬರ್ಕೆ ಠಾಣೆಗಳಲ್ಲಿ ಕೊಲೆಯತ್ನ, ಕಳವು, ಗಾಂಜಾ ಪ್ರಕರಣಗಳು ಈ ಹಿಂದೆ ದಾಖಲಾಗಿರುತ್ತವೆ.ಆರೋಪಿಯು ಹಲವಾರು ಕಡೆಗಳಲ್ಲಿ ವಿಳಾಸ ಬದಲಿಸಿ ವಾಸ ಮಾಡುತ್ತಿದ್ದು ಈತನ ಬಂದನಕ್ಕಾಗಿ ಬಲೆ ಬೀಸಿದ ಬಜಪೆ ಪೊಲೀಸರು ಈತನನ್ನು ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್,ರವರ ಮಾರ್ಗದರ್ಶನದಲ್ಲಿ DCP ಗಳಾಗ ಅಂಶು ಕುಮಾರ್,ದಿನೇಶ್ ಕುಮಾರ್,ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ ರವರ ನಿರ್ದೇಶನದಂತೆ ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪ್ರಕಾಶ್, ಪಿ.ಎಸ್.ಐ. ಗುರು ಕಾಂತಿ, ಪೂವಪ್ಪ , ಎ.ಎಸ್.ಐ. ರಾಮ ಪೂಜಾರಿ, ಮತ್ತು ಹೆಚ್ ಸಿ. ಗಳಾದ ರೋಹಿತ್, ಜಗದೀಶ್, ರಾಜೇಶ್, ಸಂತೋಷ್, ಸಂಜೀವ ಭಜಂತ್ರಿ, ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.