20 ಕೆ.ಜಿ ದನದ ಮಾಂಸ ಮತ್ತು ಸ್ಕೂಟರ್ ನ್ನು ವಶಪಡಿಸಿ, ಆರೋಪಿಯನ್ನು ಬಂಧಿಸಿದ ಎ.ಎಸ್.ಐ ರಾಮಣ್ಣಪೂಜಾರಿ

ಕರಾವಳಿ

ಬಜಪೆ ಪೊಲೀಸ್ ಠಾಣೆಯ ಎ.ಎಸ್.ಐ ರಾಮಣ್ಣಪೂಜಾರಿ ರವರು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ದಡ್ಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂಡುಬಿದ್ರೆಯ ಪುಚ್ಚೆಮೊಗರು ನಿವಾಸಿ ಮೊಹಮ್ಮದ್ ಕಮಲುದ್ದೀನ್ ಎಂಬಾತನು KA 19 HJ 1709 ನಂಬರಿನ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಸುಮಾರು 4000 ರೂಪಾಯಿ ಬೆಲೆಯ 20 ಕೆ.ಜಿ ದನದ ಮಾಂಸವನ್ನು ಮತ್ತು ಸ್ಕೂಟರ್ ನ್ನು ಸ್ವಾದೀನಪಡಿಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ.

ದನವನ್ನು ಕಡಿದು ಮಾಂಸ ಮಾಡಿರುವ ಇನ್ನು ಕೆಲವು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಈ ಪತ್ತೆ ಕಾರ್ಯಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರ ಮಾರ್ಗದರ್ಶನದಂತೆ, DCP ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ನೇತೃತ್ವದಲ್ಲಿ PSI ಪೂವಪ್ಪ, ಗುರು ಕಾಂತಿ, ASI ರಾಮಣ್ಣ ಪೂಜಾರಿ, ಸುಜನ್, ರಶೀದ ಶೇಖ, ರಾಜೇಶ್, ಸಂತೋಷ, ಮಂಜುನಾಥ, ಮೋಹನ್, ಉಮೇಶ್ ಮತ್ತು ದನಲಕ್ಷ್ಮೀ ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.