ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಲ್ಲೂರಿನ ಯುವಕ ಮೃತ್ಯು

ಕರಾವಳಿ

ಸೌದಿ ಅರೇಬಿಯಾದ ಜುಬೈಲ್ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು ನಿವಾಸಿ ಸುಲೈಮಾನ್ (35 ಪ್ರಾಯ) ಮೃತಪಟ್ಟಿರುವುದಾಗಿ ವರದಿಯಾಗಿದೆ.

ಜುಬೈಲಿನ ಲುಮಿನಾಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಲೈಮಾನ್ ಕಳೆದ ಐದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವ ಸುದ್ದಿ ಹರಿದಾಡಿತ್ತು. ಆದರೆ ಇಂದು ಮೃತಪಟ್ಟಿರುವ ವಿವರ ಲಭ್ಯವಾಗಿದೆ.

ರಸ್ತೆ ದಾಟುತ್ತಿದ್ದಾಗ ಸೌದಿಯ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ಪ್ರಥಮ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

ಮಲ್ಲೂರು ಪಲ್ಲಿಬೆಟ್ಟು ಅಬೂಬಕ್ಕರ್ ರವರ ಏಕೈಕ ಪುತ್ರನಾಗಿದ್ದ ಸುಲೈಮಾನ್ ನಿಗೆ ಇಬ್ಬರು ಸಣ್ಣ ಪ್ರಾಯದ ಮಕ್ಕಳಿದ್ದಾರೆ.