ಅಕ್ರಮ ಮರಳುಗಾರಿಕೆಗೆ ಬಿತ್ತು ಬ್ರೇಕ್.ಹಸಿರು ಪೀಠದಿಂದ ಬರೋಬ್ಬರಿ 50 ಕೋಟಿ ದಂಡ.!

ಕರಾವಳಿ

ನೇತ್ರಾವತಿ,ಪಲ್ಗುಣಿ ನದಿಯ ಒಡಲಲ್ಲಿ ನಡೆದದ್ದೇ ಅಕ್ರಮ ಮರಳು ಗಣಿಗಾರಿಕೆ.ದ.ಕ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶ ರದ್ದು .

ಡ್ಯಾಂಗಳ ಪಕ್ಕದಲ್ಲೆ ನಡೆಯುತ್ತಿತ್ತು ಭರ್ಜರಿ ಮರಳು ಗಣಿಗಾರಿಕೆ. ದಕ್ಷಿಣ ಕನ್ನಡ ಡಿಸಿ ನೀಡಿದ ಅನುಮತಿ ಪ್ರಶ್ನಿಸಿ PIL ಅರ್ಜಿ ಸಲ್ಲಿಸಿದ್ದ ವಿಜಯಪುರ ಜಿಲ್ಲೆಯ ಇಂಡಿಯ ಮಾಜಿ ಶಾಸಕ ಸೌರಭೌಮ ಬಗಲಿ ನೀರಾವರಿ ಇಲಾಖೆಗೆ ಬರೊಬ್ಬರಿ 50 ಕೋಟಿ ರೂಪಾಯಿ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರವಾಳಿಯ ಜೀವನಾಡಿಯಾಗಿರುವ ನೇತ್ರಾವತಿ ಪಾಲ್ಗುಣಿ ನದಿಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸಿ ಜೈಲು ಸೇರಿದವರು ಹಲವರು ಮಂದಿ. ಈ ನಡುವೆ ಮಂಗಳೂರು ಜಿಲ್ಲೆಯ ಎರಡು ನದಿಗಳಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆಗೆ ಹಸಿರು ನ್ಯಾಯಪೀಠ ಬ್ರೇಕ್ ಹಾಕಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ಸರ್ಕಾರಕ್ಕೆ ಛಾಟಿ ಬೀಸಿದೆ. ಅಷ್ಟೆ ಅಲ್ಲದೆ ಮರಳು ಗಣಿಗಾರಿಕೆಗೆ ಜಿಲ್ಲಾಧಿಕಾರಿ ನೀಡಿದ್ದ ಅನುಮತಿಯನ್ನು ರದ್ದುಪಡಿಸಿ, ನೀರಾವರಿ ಇಲಾಖೆಗೆ 50 ಕೋಟಿ ರೂಪಾಯಿ ದಂಡ ವಿಧಿಸಿದೆ‌.

ಕಳೆದ ಕೆಲ ತಿಂಗಳ ಹಿಂದೆ ಮಂಗಳೂರು ಜಿಲ್ಲೆಯ ನೇತ್ರಾವತಿ ಹಾಗೂ ಫಾಲ್ಗುಣಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ದ.ಕ ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಇಂಡಿಯ ಮಾಜಿ ಶಾಸಕರಾದ ಸೌರಭೌಮ ಬಗಲಿ ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕೇವಲ ಅನುಮತಿಯನ್ನು ನೀಡಿದ್ದಕ್ಕೆ ಪ್ರಶ್ನಿಸುವ ಅವಶ್ಯಕತೆ ಇರಲಿಲ್ಲ. ಆದ್ರೆ ಇಲ್ಲಿ ಡ್ಯಾಂಗಳ ಪಕ್ಕದಲ್ಲೆ ಮರಳು ಗಣಿಗಾರಿಕೆ ನಡೆಸಲಾಗುತ್ತಿತ್ತು. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶಂಭೂರು ಡ್ಯಾಮ್ ಹಾಗೂ ಫಾಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿಲಾಗಿರುವ ಅಧ್ಯಪಾಡಿ ಡ್ಯಾಮ್ ಗಳ ಸುತ್ತ ಮರಳು ಗಣಿಗಾರಿಕೆ ನಡೆಸಲಾಗುತ್ತಿತ್ತು. ಇದು ಈ ಭಾಗದ ಡ್ಯಾಂ‌ಗಳಿಗೆ ಮರಣ ಶಾಸನ ಬರೆಯುವ ಹಂತದಲ್ಲಿತ್ತು. ಇದನ್ನು ಅರಿತ ಸೌರಭೌಮ ಬಗಲಿ ಚೆನ್ನೈನ ದಕ್ಷಿಣ ವಿಭಾಗೀಯ ರಾಷ್ಟ್ರೀಯ ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಕಳೆದ 2022ರ ಡಿಸೆಂಬರ್ 6ರಂದು ಸೌರಭೌಮ ಬಗಲಿ ದಕ್ಷಿಣ ವಿಭಾಗೀಯ ರಾಷ್ಟ್ರೀಯ ಹಸಿರು ಪೀಠಕ್ಕೆ ಪಿಐಎಲ್ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಕೂಲಂಕುಷವಾಗಿ ಅವಲೋಕಿಸಿದ ಹಸಿರು ಪೀಠ ಕಳೆದ ಮಾರ್ಚ್ 23 ರಂದು ರಾಜ್ಯ ನೀರಾವರಿ ಇಲಾಖೆಗೆ 50 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ.ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಹಸಿರು ಪೀಠ ನೀರಾವರಿ ಇಲಾಖೆಗೆ ದಂಡ ವಿಧಿಸಿದೆ.ಜೊತೆಗೆ ಮಂಗಳೂರು ಜಿಲ್ಲಾಧಿಕಾರಿಗಳು ನೀಡಿದ್ದ ಮರಳು ಗಣಿಗಾರಿಕೆಗೆ ಆದೇಶವನ್ನು ರದ್ದು ಪಡಿಸಿದೆ. ಈ ಮೂಲಕ ಕಾನೂನನ್ನು ಗಾಳಿಗೆ ತೂರಿ ಮರಳು ಗಣಿಗಾರಿಕೆಗೆ ಅನುಮತಿ ನೀಡಿದವರಿಗೆ ಹಸಿರು ಪೀಠ ಛೀಮಾರಿ ಹಾಕಿದೆ. ತಕ್ಷಣವೇ ಮರಳು ಗಣಿಗಾರಿಕೆ ನಿಲ್ಲಿಸಲು ಆದೇಶಿಸಿದೆ.

ನೇತ್ರಾವತಿ ಹಾಗೂ ಪಾಲ್ಗುಣಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವಾಗ ಕಾನೂನು ಗಾಳಿಗೆ ತೂರಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಗಣಿಗಾರಿಕೆಯಿಂದ ಎರಡು ಡ್ಯಾಂಗಳಿಗೆ ಹಾನಿಯಾಗುವುದು ಅಲ್ಲದೆ, ಬೆಂಗಳೂರಿನ SEIAA ಯಿಂದಲು ಸಮ್ಮತಿ ಪಡೆದಿಲ್ಲ. ಗಣಿಗಾರಿಕೆಗೆ ಅನುಮತಿ ನೀಡುವ ವೇಳೆ ಕಾನೂನುಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿತ್ತು. ಈ ವಿಚಾರವನ್ನು ಹಸಿರು ಪೀಠ ಗಂಭೀರವಾಗಿ ಪರಿಗಣಿಸಿದೆ.
ಇಡೀ ಪ್ರಕರಣ ಗಮನಿಸಿದಾಗ ಹಸಿರು ಪೀಠ 50 ಕೋಟಿಯಷ್ಟು ಬೃಹತ್ ಮೊತ್ತದ ದಂಡ ಯಾಕೆ ನೀರಾವರಿ ಇಲಾಖೆಗೆ ವಿಧಿಸಿದೆ ಅನ್ನೋದು ಪ್ರಶ್ನೆಯಾಗಿದೆ. ಆದ್ರೆ ಡ್ಯಾಂಗಳ ಜವಾಬ್ದಾರಿಯನ್ನು ನೀರಾವರಿ ಇಲಾಖೆ ವಹಿಸಿಕೊಂಡಿರುತ್ತದೆ. ಗಣಿಗಾರಿಕೆಗೆ ಡ್ಯಾಂ ಪಕ್ಕದಲ್ಲೇ ನಡೆಯುವಾಗ ನೀರಾವರಿ ಇಲಾಖೆ ಯಾಕೆ ಸುಮ್ಮನಾಗಿತ್ತು. ಈ ನಿರ್ಲಕ್ಷ್ಯಕ್ಕೆ 50 ಕೋಟಿಯಷ್ಟು ಬಾರೀ ದಂಡ ವಿಧಿಸಿದಂತಾಗಿದೆ.