ಎಬಿಪಿ ಸಿ-ವೋಟರ್ ಸಮೀಕ್ಷೆ: ಕಾಂಗ್ರೇಸ್ ರಾಜ್ಯದಲ್ಲಿ ಜಯಭೇರಿ ಬಾರಿಸಿ,ಮುಂದಿನ ಸಿಎಂ ಹುದ್ದೆಗೆ ಸಿದ್ದರಾಮಯ್ಯ

ರಾಜ್ಯ

ಇಂದು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಮೇ.10ರಂದು ಮತದಾನ,13ರಂದು ಮತ ಏಣಿಕೆ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಚುನಾವಣಾ ಪೂರ್ವ ಸಿ–ವೋಟರ್ ಸಮೀಕ್ಷೆ ಪ್ರಕಟಗೊಂಡಿದೆ. ಈ ಸಮೀಕ್ಷೆಯ ವರದಿಯಲ್ಲಿ ಬಿಜೆಪಿ ಸರ್ಕಾರ ಕಳಪೆ ಸಾಧನೆ ಮಾಡಿದೆ ಎಂದಿದ್ದಾರೆ. ಇದಲ್ಲದೇ ಕಾಂಗ್ರೆಸ್ ಜಯಭೇರಿ ಭಾರಿಸಲಿದ್ದು, ಮುಂದಿನ ಸಿಎಂ ಸಿದ್ಧರಾಮಯ್ಯ ಆಗಲಿದ್ದಾರೆ ಎಂಬುದಾಗಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.ಎಬಿಪಿ ಸಿವೋಟರ್ ಸಮೀಕ್ಷೆಯಲ್ಲಿ ಶೇ.50ರಷ್ಟು ಮಂದಿ ಬಿಜೆಪಿ ಸರ್ಕಾರ ಕಳಪೆ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಶೇ.47ರಷ್ಟು ಮಂದಿ ಸಿಎಂ ಬಸವರಾಜ ಬೊಮ್ಮಾಯಿ ಅವರದು ಕಳಪೆ ಎಂದು ಹೇಳಿದ್ದಾರೆ.

ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವಂತ ಪ್ರಶ್ನೆಗೆ ಶೇ.39.1ರಷ್ಟು ಮಂದಿ ಸಿದ್ಧರಾಮಯ್ಯ ಎಂದ್ದಾರೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಶೇ.31.1ರಷ್ಟು ಮಂದಿ ಒಲವು ತೋರಿದ್ದಾರೆ. ಜೆಡಿಎಸ್ ನ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಶೇ.21.4, ನಳೀನ್ ಕುಮಾರ್ ಕಟೀಲ್ ಬಗ್ಗೆ ಶೇ.1.6ರಷ್ಟು, ಡಿಕೆ ಶಿವಕುಮಾರ್ ಬಗ್ಗೆ ಶೇ.3.2 ಹಾಗೂ ಡಿವಿ ಸದಾನಂದಗೌಡ ಬಗ್ಗೆ ಶೇ.1ರಷ್ಟು ಒಲವು ತೋರಿದ್ದಾರೆ.

ಕಾವೇರಿ ಜಲವಿವಾದ, ಲಿಂಗಾಯತ ಮತ್ತು ಒಕ್ಕಲಿಗರಿಗೆ ಅಲ್ಪಸಂಖ್ಯಾತ ಸ್ಥಾನಮಾನ, ಇತ್ತೀಚಿನ ಸರಣಿ ಕೊಲೆಗಳು ಸೇರಿದಂತೆ ಮುಂಬರುವ ಚುನಾವಣೆಯಲ್ಲಿ ಧಾರ್ಮಿಕ ಧ್ರುವೀಕರಣವು ಅತ್ಯಂತ ಪ್ರಭಾವಶಾಲಿ ಅಂಶವಾಗಲಿದೆ ಎಂದು ಶೇ.24.6 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.ಸಮೀಕ್ಷೆಯ ಪ್ರಕಾರ ಗ್ರೇಟರ್ ಬೆಂಗಳೂರು ಪ್ರದೇಶದ ಮತದಾರರು ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ. ಈ ಪ್ರದೇಶದಲ್ಲಿ ಬಿಜೆಪಿ 11-15 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಕಾಂಗ್ರೆಸ್ 15-19 ಸ್ಥಾನಗಳೊಂದಿಗೆ ಉತ್ತಮ ಸ್ಥಾನದಲ್ಲಿದೆ.