ಹೆಣ್ಣಳ್ಳ ಗಂಡು ಮಹಿಳೆಯಂತೆ ಕಾಣುವ ಪುರುಷ.!

ರಾಷ್ಟ್ರೀಯ

ಕೊಲ್ಲಂ ಜಿಲ್ಲೆಯಲ್ಲಿ ನಡೆಯುವ ಕೊಟ್ಟಕುಳಂಗರ ಚಾಮಾಯವಿಲಿಕ್ಕು ಉತ್ಸವದಲ್ಲಿ ಮಹಿಳೆಯಂತೆ ರೂಪಾಂತರಗೊಳ್ಳುವ ಸ್ಪರ್ಧೆಯಲ್ಲಿ, ಈ ವ್ಯಕ್ತಿಯು ಪ್ರಥಮ ಬಹುಮಾನಗಳಿಸಿದ್ದಾರೆ. ಚಿತ್ರದಲ್ಲಿ ಕಾಣು ವ್ಯಕ್ತಿ ಹೆಣ್ಣಳ್ಳ,ಗಂಡು ಎಂದರೆ ಅಚ್ಚರಿಯಾಗಬಹುದು.

ಕೇರಳದಲ್ಲಿ ನಡೆಯುವ ಈ ವಿಶಿಷ್ಟ ಪದ್ದತಿಯ ಉತ್ಸವದಲ್ಲಿ ಇಂಥದೊಂದು ಸಂಪ್ರದಾಯವಿದೆ. ಮಾರ್ಚ್‌ ಉತ್ತರಾರ್ಧದಲ್ಲಿ ಮಲಯಾಳದ ಮೀನ ಮಾಸದ 10-11ನೇ ದಿನದಲ್ಲಿ, ಅಲ್ಲಿನ ದೇವಿ ದೇವಸ್ಥಾನ ಒಂದರಲ್ಲಿ ಈ ಉತ್ಸವ ನಡೆಯುತ್ತದೆ.

ಈ ಉತ್ಸವದಲ್ಲಿ ಪ್ರತಿ ವರ್ಷದಂತೆ, ಈ ವರ್ಷ ನಡೆದ ಮಹಿಳಾ ಮೇಕಪ್ ಸ್ಪರ್ಧೆಯಲ್ಲಿ ಮಹಿಳೆಯಂತೆ ವೇಷ ಧರಿಸಿ ಮೊದಲ ಬಹುಮಾನ ಗೆದ್ದಿದ್ದಾರೆ. ಈತನ ಫೋಟೋ ಹಾಗೂ ಉತ್ಸವದ ಬಗ್ಗೆ ಅನಂತ್ ರೂಪಂಗುಡಿ ಎಂಬ ರೈಲ್ವೇಸ್ ಅಧಿಕಾರಿ ಟ್ವಿಟ್ ಮಾಡಿದ್ದಾರೆ.