ಕೃಷಿ ತಜ್ಞ ಮೂಡುಬಿದಿರೆಯ ಬನ್ನಡ್ಕದ ಸೋನ್ಸ್ ಫಾರ್ಮ್ ನ ಎಲ್. ಸಿ. ಸೋನ್ಸ್ ನಿಧನ

ಕರಾವಳಿ

ಕೃಷಿ ತಜ್ಞ, ಮೂಡುಬಿದಿರೆ ಬನ್ನಡ್ಕದ ಸೋನ್ಸ್ ಫಾರ್ಮ್‍ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್ ಅವರು ಇಂದು ವಿಧಿವಶವಾಗಿದ್ದಾರೆ.1934 ಏಪ್ರಿಲ್ 4ರಂದು ಜನಿಸಿರುವ ಡಾ.ಎಲ್.ಸಿ ಸೋನ್ಸ್ ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು.ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಬೇಧ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಬೇಧಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ,ಅದರಿಂದ ಫಸಲು ಹಾಗೂ ಲಾಭಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿ ಯನ್ನು ಹೊಂದಿದ್ದರು.

ಕೃಷಿಯ ಜೊತೆಗೆ ಸಾಮಾಜಿಕವಾಗಿಯು ಗುರುತಿಸಿಕೊಂಡಿರುವ ಸೋನ್ಸ್ ಅವರು ಹಲವಾರು ಸಂಘಸಂಸ್ಥೆಗಳ ಸಕ್ರಿಯ ಪದಾಧಿಕಾರಿ.ಅಮೇರಿಕನ್ ಸೊಸೈಟಿ ಆಫ್ ಡೌಸರ್ ಸದಸ್ಯ, ಬ್ರಿಟಿಸ್ ಸೊಸೈಟಿ ಆಫ್ ಡೌಸರ್ ಅಜೀವ ಸದಸ್ಯರಾಗಿದ್ದು, ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದ ಸಲಹೆಗಾರಾಗಿ, ಶ್ರೀಮಹಾವೀರ ವಿಧ್ಯಾವರ್ಧಕ ಸಂಘ,ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯ,ರೋಟರಿ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ,ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಅಲ್ಫ್ರೇಡ್ ಸೋನ್ಸ್ ಫೌಂಡೇಶನ್ ಸ್ಥಾಪಿಸಿದ್ದಾರೆ.

ಬೆಂಗಳೂರು ಕೃಷಿ ವಿ.ವಿಯಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ,ಅಮೇರಿಕ ಮೊಟಾನಾ ವಿ.ವಿಯಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದು,ಅಮೇರಿಕದ ಹಳೆ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಸೋನ್ಸ್