ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಮೂಡಬಿದ್ರೆ ಚುನಾವಣಾ ಕದನ ರಂಗೇರುತ್ತಿದೆ. ಭರವಸೆಯ ಯುವ ನಾಯಕ, ಮಾಸ್ ಲೀಡರ್ ಮಿಥುನ್ ರೈ ಹವಾ ಮೂಡಬಿದ್ರೆಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಮಿಥುನ್ ರೈ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡಿ ಕಾರ್ಯಕರ್ತರ ಮನಸ್ಸು ಗೆಲ್ಲುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿಯಲ್ಲಿಯೇ ಮೂಡಬಿದ್ರೆಗೆ ಅಭ್ಯರ್ಥಿ ಅಧಿಕೃತವಾಗಿ ಘೋಷಣೆ ಮಾಡಿರುವುದರಿಂದ ಮಿಥುನ್ ರೈ ಗಲ್ಲಿಗಲ್ಲಿಗೂ ತೆರಳಿ ಮೊದಲ ಸುತ್ತಿನ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಸಿದ್ದಾರೆ.
ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಬೆದ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದರಾ ಅನ್ನುವ ಬಗ್ಗೆ ಬಿಜೆಪಿಯಲ್ಲಿಯೇ ಗೊಂದಲಗಳಿವೆ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಒಂದೆರಡು ಹೊಸ ಮುಖಗಳ ಹೆಸರು ಕೇಳಿಬರುತ್ತಿದ್ದರೂ ಅದಿನ್ನು ಅಂತಿಮವಾಗಿಲ್ಲ. ಮಿಥುನ್ ರೈ ಹವಾದ ಮುಂದೆ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಸಪ್ಪೆಯಾಗಲಿದೆ ಅನ್ನುವುದು ಕ್ಷೇತ್ರದ ಜನರ ಅಭಿಪ್ರಾಯ.

ಇನ್ನು ಜೆಡಿಎಸ್, ಎಸ್ ಡಿ ಪಿ ಐ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಿಜೆಪಿ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಮಿಥುನ್ ರೈ ವಿರುದ್ಧ ಪುಂಖಾನುಪುಂಖವಾಗಿ ಅಪಪ್ರಚಾರದಲ್ಲಿ ನಿರತರಾಗಿದ್ದರೂ ಮಿಥುನ್ ರೈ ವೇದಿಕೆಗಳಲ್ಲಿ ಸೂಕ್ತ ಉತ್ತರ ನೀಡುತ್ತಾ ಬರುತ್ತಿರುವುದರಿಂದ ಬಿಜೆಪಿ ಅಪಪ್ರಚಾರಗಳೆಲ್ಲ ಠುಸ್ ಪಟಾಕಿಯ ರೀತಿ ಆಗುತ್ತಿದೆ.
ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಬೆದ್ರದಲ್ಲಿ ಅಭಯ್ ಚಂದ್ರ ಜೈನ್ ವಿರುದ್ಧ ಬಿಜೆಪಿ ಕಳೆದ ಚುನಾವಣೆಯಲ್ಲಿ ಭರ್ಜರಿ ಜಯ ಕಂಡಿತ್ತು. ಸೋತ ನಂತರ ಅಭಯಚಂದ್ರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ತಮ್ಮ ಉತ್ತರಾಧಿಕಾರಿಯಾಗಿ ಬಂಟ ಸಮುದಾಯದ ಮಿಥುನ್ ರೈ ಯವರನ್ನು ಘೋಷಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಅಸ್ತು ಎಂದು ಮಿಥುನ್ ರೈ ಯವರನ್ನೇ ಅಭ್ಯರ್ಥಿಯಾಗಿ ಘೋಷಿಸಿದೆ.
ಅಭಯಚಂದ್ರ ಜೈನ್-ಮಿಥುನ್ ರೈ ಜೋಡೆತ್ತುಗಳಾಗಿ ಕ್ಷೇತ್ರದಾದ್ಯಂತ ಸುತ್ತಿ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾರೀ ಸಂಖ್ಯೆಯಲ್ಲಿ ಯುವ ಸಮೂಹ ಮಿಥುನ್ ರೈ ಪರ ಚುನಾವಣಾ ಪ್ರಚಾರದಲ್ಲಿ ಧುಮುಕಿದೆ. ರೈ ಹವಾ ಕಂಡು ಬಿಜೆಪಿ ತಮ್ಮ ಅಭ್ಯರ್ಥಿಯನ್ನೇ ಬದಲಾಯಿಸುವ ಮಟ್ಟಿಗೆ ಮುಂದುವರಿದಿದೆ.
ಕ್ಷೇತ್ರದ ಮತದಾರರ ಸಂಕಷ್ಟಗಳಿಗೆ ಕಳೆದ ಮೂರು ವರ್ಷಗಳಿಂದ ಮಿಡಿಯುತ್ತಾ ಬಂದ ಮಿಥುನ್ ರೈ ಪರ ಬೆದ್ರದ ಜನತೆ ಒಗ್ಗಟ್ಟಾಗಿದೆ. ಈ ಬಾರಿ ಮಿಥುನ್ ರೈ ಯವರನ್ನು ಭರ್ಜರಿ ಮತಗಳಿಂದ ಗೆಲ್ಲಿಸಿ ಸಮರ್ಥ ನಾಯಕನೊಬ್ಬ ಶಾಸಕನಾಗಿ ವಿಧಾನಸಭೆಗೆ ಕಳುಹಿಸಿಕೊಡಲು ಮುಂದಾಗಿದ್ದಾರೆ. ತುಳುನಾಡು ರಕ್ಷಕ, ಪಿಲಿನಲಿಕೆಯ ರೂವಾರಿ ಮಿಥುನ್ ರೈ ಬಗ್ಗೆ ಮೂಡಬಿದ್ರೆ ಕ್ಷೇತ್ರದಾದ್ಯಂತ ದೊಡ್ಡ ಅಲೆಯೇ ಎದ್ದಿದೆ. ಬಿಜೆಪಿಯ ತಪ್ಪು ಹೆಜ್ಜೆಗಳನ್ನು ಮತದಾರರ ಮುಂದಿಟ್ಟು ಕಾಂಗ್ರೆಸ್ ಯಶಸ್ವಿಯಾಗಿ ಕ್ಯಾಂಪೈನ್ ಆರಂಭಿಸಿದೆ. ಮಿಥುನ್ ರೈ ಹೆಸರೇ ಕ್ಷೇತ್ರದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಭರವಸೆಯ ನಾಯಕನಿಗೆ ಜೈಕಾರ ಮೊಳಗುತ್ತಿದೆ.