ಬಿಜೆಪಿ ಅಭ್ಯರ್ಥಿಗಳ ಮುಗಿಯದ ಗೊಂದಲ, ಬಗೆಹರಿಯದ ಟಿಕೆಟ್‌ ಹಂಚಿಕೆಯ ಕಗ್ಗಂಟು

ರಾಜ್ಯ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಗೃಹ ಸಚಿವರು ಪಕ್ಷದ ರಾಜ್ಯ ನಾಯಕರೊಂದಿಗೆ ಶನಿವಾರ ಇಡೀ ದಿನ ಸಮಾಲೋಚನೆ ನಡೆಸಿದರು. ಆದರೂ, ಪಕ್ಷದ ಟಿಕೆಟ್‌ ಹಂಚಿಕೆಯ ಕಗ್ಗಂಟು ಬಗೆಹರಿದಿಲ್ಲ. ರಾಜ್ಯ ಸಮಿತಿಯು ಅಕಾಂಕ್ಷಿ ಅಭ್ಯರ್ಥಿಗಳಿರುವ 2–3 ಹೆಸರುಗಳನ್ನು ಶಿಫಾರಸು ಮಾಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬ ಆಕಾಂಕ್ಷಿಯ ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಶನಿವಾರ ನಡೆಸಲಾಗಿದೆ.ಭಾನುವಾರ ಈ ಸಭೆ ಮುಂದುವರಿಯುವ ಸಾಧ್ಯತೆ ಇದೆ.

ಕೇಂದ್ರ ಸಂಸದೀಯ ಮಂಡಳಿಯ ಸಭೆ ಭಾನುವಾರ ಸಂಜೆ ನಡೆಯಲಿದ್ದು, ಅಲ್ಲಿ ಪಟ್ಟಿಗೆ ಅಂತಿಮ ರೂಪ ನೀಡಲಾಗುತ್ತದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಹಾಗೂ ಸಂಸದೀಯಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ. ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಭಾನುವಾರ ತಡ ರಾತ್ರಿ ಅಥವಾ ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.