ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬೀದಿಗೆ ಬಂದಿದೆ.ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೆಹ್ಲೋಟ್‌ಗೆ ಮನವಿ ಮಾಡಿದ್ದೆ ಆದರೆ ಯಾವುದೇ ಉತ್ತರ ಸಿಕ್ಕಿಲ್ಲ.ಎಂದು ಸಚಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿಸಿ ನಾನು ಏಪ್ರಿಲ್ 11ರಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವೆ ಎಂದು ಅವರು ಹೇಳಿದ್ದಾರೆ.ನಾವು ಒಟ್ಟಾಗಿ ವಸುಂಧರಾ ಅವರ ಸರ್ಕಾರದ ವಿರುದ್ಧ ಆ ಆರೋಪಗಳನ್ನು ಮಾಡಿದ್ದೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಾನು ಕೂಡ ಕೆಲವು ಆರೋಪಗಳನ್ನು ಮಾಡಿದ್ದೇನೆ. ನನಗೆ ಸೇಡಿನ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಆದರೆ ವಿರೋಧ ಪಕ್ಷವಾಗಿ ನಮಗೆ ಸ್ವಲ್ಪ ವಿಶ್ವಾಸಾರ್ಹತೆ ಇತ್ತು ಮತ್ತು ಅದೇ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.ನಾವು ಮಾತಿನಂತೆ ನಡೆಯಬೇಕು.ಬಿಜೆಪಿ ಸರ್ಕಾರದ ವಿರುದ್ಧ ನಾವು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಇದು ಸರಿಯಾದ ಸಮಯ ಎಂದು ನಾನು ಸುಮಾರು 1.5 ವರ್ಷಗಳ ಹಿಂದೆ ಗೆಹ್ಲೋಟ್ ಜಿ ಅವರಿಗೆ ಪತ್ರ ಬರೆದಿದ್ದೇನೆ. ನಾವು ಮಾತು ಉಳಿಸಿಕೊಳ್ಳುವುದನ್ನು ಜನರಿಗೆ ತೋರಿಸಬೇಕು. ಈ ಕೆಲಸ ಕಾಂಗ್ರೆಸ್ ಮಾಡಬೇಕು ಎಂದು ಪೈಲಟ್ ಹೇಳಿದ್ದಾರೆ.
ನಾನು 2022 ರಲ್ಲಿ ಮೊದಲ ಪತ್ರವನ್ನು ಬರೆದಿದ್ದೇನೆ. ಯಾವುದೇ ಉತ್ತರ ಬರಲಿಲ್ಲ. ನಂತರ ನಾನು ನವೆಂಬರ್ 2022 ರಂದು ಮತ್ತೆ ಪತ್ರ ಬರೆದಿದ್ದೇನೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮಗೆ 21 ಸ್ಥಾನಗಳಿಂದ 100 ಸೀಟ್‌ಗೆ ಬಡ್ತಿ ನೀಡಿದ್ದಾರೆ. ಚುನಾವಣೆಗೆ ಮುನ್ನ ಈ ಭ್ರಷ್ಟಾಚಾರ ಆರೋಪಗಳ ಮೇಲೆ ಕ್ರಮಕೈಗೊಳ್ಳುವ ಮೂಲಕ ಜನರಿಗೆ ನಾವು ನೀಡಿರುವ ಭರವಸೆ ಈಡೇರಿಸಬೇಕು ಎಂದು ಅವರು ಹೇಳಿದ್ದಾರೆ.ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಲು ಕೇಂದ್ರವು ಇಡಿ, ಸಿಬಿಐಯಂತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ರಾಜಸ್ಥಾನ ಸರ್ಕಾರವು ತನ್ನ ಏಜೆನ್ಸಿಗಳನ್ನು ಸಹ ಬಳಸುತ್ತಿಲ್ಲ ಎಂದು ಅವರು ಹೇಳಿದರು.
ಸಚಿನ್ ಪೈಲಟ್ ಅವರು ಹಲವು ಬಾರಿ ತನ್ನದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.