ಮುಚ್ಚಲಿದೆ ಭಾರತದ ಮತ್ತೊಂದು ಬ್ಯಾಂಕ್

ರಾಷ್ಟ್ರೀಯ

ದೇಶದಲ್ಲಿ ವಿತ್ತ ವಲಯದಲ್ಲಿ ಸಾಕಷ್ಟು ಸಂಚಲನ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸರ್ಕಾರಿ ಬ್ಯಾಂಕುಗಳು ಖಾಸಗಿಕರಣಗೊಳ್ಳಲಿವೆ. ಇದೇ ಹಿನ್ನಲೆಯಲ್ಲಿ ಮತ್ತೊಂದು ದೊಡ್ಡ ಬ್ಯಾಂಕ್ ಕೂಡ ಖಾಸಗಿಕರಣಗೊಳ್ಳುತ್ತಿದೆ.
ಮೂಲಗಳ ಪ್ರಕಾರ ಬಂದಿರುವ ಮಾಹಿತಿಯ ಅನುಸಾರ ಐಡಿಬಿಐ ಬ್ಯಾಂಕ್ ನ ಖಾಸಗಿಕರಣ ಈಗಾಗಲೇ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಕೆಲವು ದಿನಗಳಿಂದ ಐಡಿಬಿಐ ಬ್ಯಾಂಕಿನ ಹೂಡಿಕೆಯ ಪ್ರಕ್ರಿಯೆಯನ್ನು ಮುಂದೂಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು.ಸದ್ಯಕ್ಕೆ ಐಡಿಬಿಐ ಬ್ಯಾಂಕಿನ 61% ಪಾಲನ್ನು ಎಲ್ಐಸಿ ಹೊಂದಿದೆ ಎಂಬುದಾಗಿ ತಿಳಿದು ಬಂದಿದೆ. ಬ್ಯಾಂಕಿನ ಖಾಸಗಿಕರಣದ ಬಿಡ್ಡಿಗಾಗಿ ಈಗಾಗಲೇ ವರ್ಷದ ಆರಂಭದಲ್ಲಿ ಸಾಕಷ್ಟು ಆಸಕ್ತಿದಾರರನ್ನು ಸ್ವೀಕರಿಸಿದ್ದು ಮುಂದಿನ ದಿನಗಳಲ್ಲಿ ಈ ಬಿಡ್ಡು ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸದ್ಯದ ಮಟ್ಟಿಗೆ IDBI ಬ್ಯಾಂಕಿನ ಒಟ್ಟು ಪಾಲುದಾರಿಕೆಯಲ್ಲಿ,ಸರ್ಕಾರ ಹಾಗೂ ಎಲ್ಐಸಿ ಒಟ್ಟು ಸೇರಿದರೆ ಐಡಿಬಿಐ ಬ್ಯಾಂಕಿನ 94.72 ಪ್ರತಿ ಶತಮಾನ ಪಾಲು ಇದೆ.ಆದರೆ ಈ ಬ್ಯಾಂಕ್ ಖಾಸಗಿಕರಣಗೊಂಡ ನಂತರ ಮುಂದಿನ ದಿನಗಳಲ್ಲಿ ಇದು ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇದು ಈ ಬ್ಯಾಂಕಿನ ಉದ್ಯೋಗಿಗಳು ಮತ್ತು ಹಣವನ್ನು ಜಮಾವಣೆ ಮಾಡಿರುವಂತಹ ಗ್ರಾಹಕರ ನಿದ್ದೆ ಕೆಡಿಸುವುದಕ್ಕೆ ಕಾರಣವಾಗಲಿದೆ. ಹೇಗಿದ್ದರೂ ಕೂಡ ಸರ್ಕಾರ ಖಾಸಗಿಕರಣ ಮಾಡಿದ ನಂತರವೂ ಕೂಡ ಅದರ ಉದ್ಯೊಗಿಗಳು ಮತ್ತು ಬ್ಯಾಂಕನ್ನು ನಂಬಿರುವ ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡಬಹುದು ಎಂದು ಭಾವಿಸಲಾಗಿದೆ.