ಸಹಸ್ರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿ ಬಿಜೆಪಿಗೆ ನಡುಕ ಹುಟ್ಟಿಸಿದ ಮಿಥುನ್ ರೈ

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಇಂದು ಸಹಸ್ರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ರಂಗತಾಲೀಮಿಗೆ ಚಾಲನೆ ನೀಡಿದ್ದಾರೆ. ಮಿಥುನ್ ರೈ ವಿರುದ್ಧ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಸ್ಪರ್ಧಿಸುತ್ತಿದ್ದಾರೆ.

ಮೂಡಬಿದ್ರೆ ಕಾಂಗ್ರೆಸ್ ಗೆ ಶಕ್ತಿ ತುಂಬುವ ರೀತಿಯಲ್ಲಿ ಬಹುತೇಕ ಯುವಕರು ಮಿಥುನ್ ರೈ ಜೊತೆಗೆ ಸ್ವರಾಜ್ ಮೈದಾನದಿಂದ ಮೂಡಬಿದ್ರೆ ಜಂಕ್ಷನ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾದ ಮೂಲಕ ಸಂಚರಿಸಿ ಅಲ್ಲಿಂದ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಯಿತು. ಅಪಾರ ಸಂಖ್ಯೆಯ ಅಭಿಮಾನಿಗಳು ಜೊತೆಗಿದ್ದಿದ್ದು ಬೆದ್ರದ ಇತಿಹಾಸದಲ್ಲಿ ವಿಶೇಷವಾಗಿತ್ತು.

ಕಾಲ್ನಡಿಗೆ ಜಾಥಾಕ್ಕೆ ಮುನ್ನ ಸ್ವರಾಜ್ ಮೈದಾನದಲ್ಲಿ ಅಬ್ಬರದ ಸಾರ್ವಜನಿಕ ಸಭೆ ನಡೆದಿತ್ತು. ಮಿಥುನ್ ರೈ ಪರ ಬೃಹತ್ ಜಯಘೋಷಗಳು ಮೊಳಗಿದವು.

ಮಿಥುನ್ ರೈ ನಾಮಪತ್ರ ಸಲ್ಲಿಕೆಯ ಇಂದಿನ ದಿನ ಸೇರಿದ ಅಪಾರ ಜನಸ್ತೋಮ, ಮಿಥುನ್ ರೈ ಪರ ಯುವಜನತೆ ಸಾಥ್ ಕೊಡುತ್ತಿರುವುದು, ಬಿಜೆಪಿ, ಜೆಡಿಎಸ್ ನಿಂದ ಭ್ರಮನಿರಸನಗೊಂಡು ಯುವಕರು ಮಿಥುನ್ ರೈ ಕ್ಯಾಂಪ್ ನಲ್ಲಿ ಗುರುತಿಸಿಕೊಳ್ಳುತ್ತಿರುವುದು ಬಿಜೆಪಿಗೆ ನಡುಕ ಹುಟ್ಟಿಸುತ್ತಿದೆ. ಮಿಥುನ್ ರೈ ಅಬ್ಬರದ ಮುಂದೆ ಬಿಜೆಪಿ ಸಪ್ಪೆಯಾಗಿ ಕಾಣುತ್ತಿದೆ. ಕ್ಷೇತ್ರದ ಜನತೆ ಈ ಬಾರಿ ಬೆದ್ರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಮಿಥುನ್ ರೈ ಕೊರಳಿಗೆ ವಿಜಯದ ಹಾರ ಖಚಿತ ಅನ್ನುತ್ತಿದ್ದಾರೆ.