ಭರತ್ ಶೆಟ್ಟಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವವರು ಯಾರು.?

ಕರಾವಳಿ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾದಂತೆ ತೋರುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ಭರತ್ ಶೆಟ್ಟಿ, ಕಾಂಗ್ರೆಸ್ ನಿಂದ ಯುವ ಮುಖ ಇನಾಯತ್ ಅಲಿ ಹಾಗೂ ಜೆಡಿಎಸ್ ನಿಂದ ಮೊಹಿದ್ದೀನ್ ಬಾವಾ ಕಣಕ್ಕಿಳಿದಿರುವುದು ಉತ್ತರದ ಒಟ್ಟಾರೆ ಲೆಕ್ಕಾಚಾರವನ್ನೇ ಬದಲಾಯಿಸಿದೆ. ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರಗಳು ಬಹುತೇಕ ಬಿಜೆಪಿ ಪಕ್ಷಕ್ಕೆ ಲಾಭವಾಗಿರುವುದು ಈ ಎಲ್ಲಾ ಹಿಂದಿನ ಚುನಾವಣೆಗಳು ಸಾಬೀತು ಪಡಿಸಿದೆ.

ಬಿಜೆಪಿಯಿಂದ ಕಣಕ್ಕಿಳಿದಿರುವ ಹಾಲಿ ಶಾಸಕ ಭರತ್ ಶೆಟ್ಟಿ ಬಗ್ಗೆ ಕ್ಷೇತ್ರಾದ್ಯಂತ ಆಡಳಿತ ವಿರೋಧಿ ಅಲೆ ಇದ್ದರೂ, ಗುಪ್ತ ಸರ್ವೇಯಲ್ಲಿ ಭರತ್ ಶೆಟ್ಟಿ ರವರಿಗೆ ಹಿನ್ನಡೆ ತೋರಿಸಿದರೂ ಅದರ ಲಾಭವನ್ನು ಪಡೆಯಲು ವಿರೋಧ ಪಕ್ಷಗಳು ವಿಫಲವಾಗಿದೆಯಾ ಅನ್ನುವ ಅನುಮಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಮೊದಲೇ ಇಬ್ಬರು ನಾಯಕರನ್ನು ಮನವೊಲಿಸಿ ಬಂಡಾಯದ ಬಾವುಟ ಹಾರದಂತೆ ತಡೆದಿದ್ದರೆ ಈ ಬಾರಿ ಉತ್ತರದಲ್ಲಿ ಚಮತ್ಕಾರ ನಡೆಯುವ ಸಾಧ್ಯತೆ ಇತ್ತು.

ಆದರೆ ಇದೀಗ ಕಾಂಗ್ರೆಸ್-ಜೆಡಿಎಸ್ ಪ್ರಬಲವಾಗಿ ಕಣಕ್ಕಿಳಿದಿರುವುದರಿಂದ ಜಾತ್ಯತೀತ ಮತಗಳು ಹರಿದು ಹಂಚಿಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಅದೇ ರೀತಿ ಇಬ್ಬರು ಪ್ರಬಲ ನಾಯಕರು ಹಿಂಬಾಲಕರನ್ನು ಕಟ್ಟಿಕೊಂಡು ಫೀಲ್ಡಿಗಿಳಿದಿರುವುದರಿಂದ ಸಹಜವಾಗಿಯೇ ಉತ್ತರದಲ್ಲಿ ಭರತ್ ಶೆಟ್ಟರಿಗೆ ಅನುಕೂಲವಾಗಲಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ.

ಕೇವಲ ಅಲ್ಪಸಂಖ್ಯಾತ ಸಮುದಾಯದ ಮತದಾರರು ಗುಂಪು ಕಟ್ಟಿಕೊಂಡು ಪರಸ್ಪರ ಕೆಸರೆರಚುತ್ತಾ ಇರುವುದು, ಮುಸಿ ಮುಸಿ ನಗುವಂತೆ ಮಾಡಿದೆ.

ಮಂಗಳೂರು ಉತ್ತರದಲ್ಲಿ ಒಮ್ಮೆ ಗೆದ್ದವರು ಮತ್ತೊಂದು ಚುನಾವಣೆಯಲ್ಲಿ ಸೋತ ಇತಿಹಾಸವೇ ಜಾಸ್ತಿ.ಆದರೆ ಈ ಬಾರಿ ಭರತ್ ಶೆಟ್ಟಿ ಅದನ್ನು ಮುರಿದು ಹೊಸ ಸಂಪ್ರದಾಯ ನಾಂದಿ ಹಾಡುತ್ತಾರೋ..? ಅಥವಾ ಕೊನೆ ಕ್ಷಣದಲ್ಲಿ ಭರತ್ ಶೆಟ್ಟಿಯವರನ್ನು ಕಟ್ಟಿಹಾಕಲಾಗುತ್ತೊ ಅನ್ನುವುದನ್ನು ಕೊನೆ ಕ್ಷಣದವರೆಗೂ ಕಾದು ನೋಡಬೇಕಾಗಿದೆ.