ದರ್ಗಾ ಝಿಯಾರತ್ತ್ ಮುಗಿಸಿ ಕುಟುಂಬಸ್ಥರ ಜೊತೆ ಬೀಚ್ ಗೆ ತೆರಳಿದ್ದ ಗಂಜಿಮಠ ಮಳಲಿ ನಿವಾಸಿ ಸಮುದ್ರ ಪಾಲು

ಕರಾವಳಿ

ಕುಟುಂಬಸ್ಥರ ಜೊತೆ ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಝಿಯಾರತ್ ಮುಗಿಸಿ ಬೀಚಿಗೆ ತೆರಳಿದ್ದ ವ್ಯಕ್ತಿಯೋರ್ವರು ಸಮುದ್ರ ಪಾಲಾದ ಘಟನೆ ನಡೆದಿದೆ.
ಗಂಜಿಮಠ ಸಮೀಪದ ಮಳಲಿ ನಿವಾಸಿ ಖಾಲಿದ್ ಎಂಬವರು ಸಮುದ್ರ ಪಾಲಾದ ವ್ಯಕ್ತಿ.

ಮಳಲಿಯ ಖಾಲಿದ್ ಅವರು ತನ್ನ ಕುಟುಂಸ್ಥರ ಜೊತೆ ಉಳ್ಳಾಲ ಸೈಯ್ಯದ್ ದರ್ಗಾ ಝಿಯಾರತ್ ಮುಗಿಸಿದ ಬಳಿಕ ಉಳ್ಳಾಲ ಬೀಚ್ ಗೆ ಹೋಗಿ ಸಮುದ್ರಕ್ಕೆ ಇಳಿದಿದ್ದರು.ಅ ವೇಳೆ ಸಮುದ್ರ ಬೃಹತ್ತ್ ಅಲೆಯೊಂದಕ್ಕೆ ಖಾಲಿದ್ ಹಾಗೂ ಅವರ ಮಗ ಸಿಲುಕಿ ಸಮುದ್ರಪಾಲಾಗಿದ್ದರು.
ಇದನ್ನು ಕಂಡ ಅಲ್ಲಿದ್ದ ಈಜುಗಾರರು ಬಾಲಕನನ್ನು ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಲಿದ್ ರನ್ನು ರಕ್ಷಣೆ ಮಾಡಲು ಬಹಳ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಆ ವೇಳೆಗೆ ಸಮುದ್ರ ಪಾಲಾಗಿದ್ದರು.ಬಳಿಕ ಮೃತದೇಹ ಹುಡುಕಿ ಮೇಲಕ್ಕೆತ್ತಲಾಗಿದೆ.ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ