ಕರ್ನಾಟಕ ರಾಜ್ಯದಲ್ಲಿ ಅತಂತ್ರ ಸ್ಥಿತಿ, ಸಮ್ಮಿಶ್ರ ಸರಕಾರದ ಸಾಧ್ಯತೆ.! ಸಮೀಕ್ಷಾ ವರದಿಯಿಂದ ಬಹಿರಂಗ

ರಾಜ್ಯ

ರಾಜ್ಯದಲ್ಲಿ ಅಪ್ಪ-ಮಕ್ಕಳೇ.. ಕಿಂಗ್ ಮೇಕರ್.?

ಮೇ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳಿಂದ ಚುನಾವಣಾ ಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಈ ಮೂರು ಪಕ್ಷಗಳ ಬಹುಮತದ ಬಗ್ಗೆ ಸಮೀಕ್ಷೆ ನಡೆಸಲಾಗಿ,ಸಮೀಕ್ಷೆಯ ವರದಿ ಪ್ರಕಾರ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರುವ ಸಾಧ್ಯತೆ ಬಹಳ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಹೆಚ್ಚಿದೆ.ಬಿಜೆಪಿಯು ಕಳೆದ ಬಾರಿಗಿಂತ ಕಳಪೆ ಸಾಧನೆ ತೋರುವ ಸಾಧ್ಯತೆ ಇದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ 40 ರಷ್ಟು ಮತ ಹಂಚಿಕೆ ಪಡೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ಪಕ್ಷ ಶೇ 33.9 ಮತ್ತು ಜೆಡಿಎಸ್ ಶೇ 18.8 ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ 38ರ ಮತ ಹಂಚಿಕೆ ಹೊಂದಿದ್ದು,ಈ ಬಾರಿ ಅದು ಶೇಕಡಾ 40 ಕ್ಕೆ ಏರಲಿದೆ.ಬಿಜೆಪಿ ಪಕ್ಷವು ಕಳೆದ ಬಾರಿ ಶೇ 36 ಪಡೆದಿದ್ದು,ಈ ಬಾರಿ ಶೇ 33.9 ಕ್ಕೆ, ಇಳಿಯಲಿದೆ ಎಂದು ಎಂದು ಸಂಸ್ಥೆಗಳು ನಡೆಸಿದ ಸಮೀಕ್ಷೆಯಿಂದ ಸಾಬೀತಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತನ್ನ ಮತಗಳನ್ನು ಶೇ.18 ರಿಂದ 18.8 ಕ್ಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ. ಪಕ್ಷೇತರರಿಗೆ ಮತ ಹಂಚಿಕೆಯಲ್ಲಿ ಬಹಳ ಅಘಾತವಾಗುವ ಸಾಧ್ಯತೆ ಇದೆ.

ಸಮೀಕ್ಷಾ ವರದಿ ಪ್ರಕಾರ, ಕಾಂಗ್ರೆಸ್ ಪಕ್ಷವು 106 ರಿಂದ 116 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದ್ದು, ಆಡಳಿತಾರೂಢ ಬಿಜೆಪಿ 79 ರಿಂದ 89 ಸ್ಥಾನಗಳನ್ನು, ಜೆಡಿಎಸ್​​ 24 ರಿಂದ 34 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದು,ಇತರ ಪಕ್ಷೇತರರು 5 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.

ಹಿಂದುತ್ವದ ಪ್ರಯೋಗ ಶಾಲೆಯಾದ ಕರ್ನಾಟಕದ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಮತ ಹಂಚಿಕೆ ಪ್ರಮಾಣ ಶೇ 39ರಿಂದ 35.4ಕ್ಕೆ ಇಳಿಕೆಯಾಗಲಿದ್ದು, ಬಿಜೆಪಿ ಮತ ಪ್ರಮಾಣ ಶೇ 51 ರಿಂದ ಶೇ 50.3ಕ್ಕೆ ಕುಸಿಯಲಿದೆ.ಜೆಡಿಎಸ್ ಪಕ್ಷದ ಮತ ಹಂಚಿಕೆ ಶೇ 6 ರಿಂದ 8.3 ಏರಿಕೆಯಾಗಿ ಪರ್ಯಾಯ ಶಕ್ತಿಯಾಗಿ ಬೆಳೆದು,ಕರಾವಳಿ ಭಾಗದಲ್ಲಿ ಜೆಡಿಎಸ್ ಚೇತರಿಸಿ ಕೊಳ್ಳಲಿದೆ.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ 1 ರಿಂದ 5 ಸ್ಥಾನಕ್ಕೇರುವ ನಿರೀಕ್ಷೆ ಇದ್ದು, ಬಿಜೆಪಿ ಪಕ್ಷವು 16 ರಿಂದ 20 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಜೆಡಿಎಸ್ ಈ ಬಾರಿ ಖಾತೆ ತೆರೆಯದಿದ್ದರೂ ಉತ್ತಮ ಸಾಧನೆ ಮಾಡಲಿದೆ.ಒಬ್ಬ ಅಭ್ಯರ್ಥಿಯ ಗೆಲುವಿನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.