15 ನಿಮಿಷಗಳಲ್ಲಿ ATM ಒಡೆದು ಹಣ ದೋಚುವ ಕೋರ್ಸ್ ಬಗ್ಗೆ ತರಬೇತಿ ನೀಡುತ್ತಾ ಎಟಿಎಂ ಬಾಬಾ ಎಂಬುದಾಗಿಯೇ ಕರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಿಹಾರದಲ್ಲಿ ಬಂದಿಸಿದ್ದಾರೆ.
ಬಿಹಾರದ ಲಖನೌದಲ್ಲಿ ನಡೆದಿರುವ ಎಟಿಎಂ ದರೋಡೆ ಪ್ರಕರಣದ ಅಪರಾಧಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಈ ವೇಳೆ ತಮಗೆ ಬಿಹಾರದ ಛಾಪ್ರಾದಲ್ಲಿನ ಸುಧೀರ್ ಮಿಶ್ರಾ ಎಂಬ ಎಟಿಎಂ ಒಡೆದು ದರೋಡೆ ನಡೆಸುವ ತರಬೇತಿ ನೀಡಿದ್ದ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಬಂಧಿತ ಕಳ್ಳರು ನೀಡಿದಂತ ಮಾಹಿತಿ ಮೇರೆಗೆ ಸುಧೀರ್ ಮಿಶ್ರಾ ಎಂಬಾತನನ್ನು ಬಂಧಿಸಿದ್ದಾರೆ. ಈತ ಎಟಿಎಂ ಬಾಬ ಎಂಬುದಾಗಿ ಕರೆಸಿಕೊಂಡಿದ್ದು, 15 ನಿಮಿಷದಲ್ಲಿ ಎಟಿಎಂ ಹೇಗೆ ದರೋಡೆ ಮಾಡಬಹುದು ಎಂಬುದಾಗಿ ತರಬೇತಿ ನೀಡುತ್ತಿದ್ದನು. ಈ ತರಬೇತಿಯಿಂದಲೇ ಏಪ್ರಿಲ್ 3ರಂದು ಲಖನೌದಲ್ಲಿನ ಎಸ್ ಬಿಐ ಬ್ಯಾಂಕಿನ ಎಟಿಎಂ ಮಿಷನ್ ಒಡೆದು,ಲೂಟಿ ಮಾಡಿ 39 ಲಕ್ಷ ಹಣ ದೋಚಿದ್ದರು.ಇದೀಗ ತರಬೇತುಧಾರ ಸುಧೀರ್ ಮಿಶ್ರಾನನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುತ್ತಾರೆ.