ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಜೂನ್ ಒಂದರಿಂದ ಕರೆಂಟ್ ಬಿಲ್ಲು ಕಟ್ಟಬೇಡಿ: ಡಿ.ಕೆ ಶಿವಕುಮಾರ್

ರಾಜ್ಯ

ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಐದು ಗ್ಯಾರಂಟಿ ಭರವಸೆ ನೀಡಿದೆ. ಜೂನ್ 1 ರಿಂದ ಕಾಂಗ್ರೆಸ್ ಪಕ್ಷದ ಹೊಸ ಸರ್ಕಾರ ಬರುತ್ತದೆ.ಅಲ್ಲಿಂದ ಯಾರು ಕರೆಂಟ್ ಬಿಲ್ಲನ್ನು ಕಟ್ಟಬೇಡಿ. ಬೆಲೆ ಏರಿಕೆ ಮೀತಿ ಮೀರಿದೆ. ವರ್ಷಕ್ಕೆ ಪ್ರತಿ ಕುಟುಂಬಕ್ಕೆಹೊಸ ಸರಕಾರದ ವತಿಯಿಂದ 24 ಸಾವಿರ ಬರುತ್ತದೆ.ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಕೊಡುತ್ತೇವೆ.ಬಡವರು ಹಸಿವಿನಿಂದ ಬಳಲಬಾರದು ಯುವಕರಿಗೆ ಕೆಲಸ ಕೊಡುತ್ತೇವೆ ಅಂತ ಬಿಜೆಪಿ ಹೇಳಿತ್ತು. ಆದರೆ ಆ ಮೇಲೆ ಪಕೋಡ ಮಾರಿ ಅಂತ ಹೇಳಿದರು.ಪದವಿ ಓದಿ ಪಕೋಡ ಮಾರಾಟ ಮಾಡಬೇಕಾ.? ಹೀಗಾಗಿ ಪದವಿ ಮಾಡಿರೋ ಯುವಕ,ಯುವತಿಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆ.ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ.. ಇವುಗಳನ್ನೆಲ್ಲಾ ಘೋಷಣೆ ಮಾಡಿಲ್ಲ ಅಂದ್ರೆ‌ ಮತ್ತೆ ನಾವು ನಿಮ್ಮಲ್ಲಿ ಓಟು ಕೇಳೋಕೆ ಬರಲ್ಲ. ಇದು ಕಾಂಗ್ರೆಸ್ ಪಕ್ಷದ ಶಪಥ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಳವಳ್ಳಿಯಲ್ಲಿ ಶಪಥ ಮಾಡಿದರು.

ಮಳವಳ್ಳಿಯಲ್ಲಿ ಮಾತನಾಡಿದಂತ ಅವರು, ಮಹಾತ್ಮ ಗಾಂಧೀಜಿ ಕುಳಿತಿದ್ದ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಹಿಡಿದಿದ್ದಾರೆ.
ನರೇಂದ್ರ ಸ್ವಾಮಿ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ಇದು ನನ್ನ ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಯಾಗಲಿದೆ ಎಂದರು.ಮಂಡ್ಯದಲ್ಲಿ ಕಳೆದ ಬಾರಿ ಒಂದು ಸೀಟು ಗೆಲ್ಲೋಕೆ ಆಗಲಿಲ್ಲ. ಈ ಬಾರಿ ಅಭ್ಯರ್ಥಿ ಹಾಕಿದ್ದೇವೆ ಹೀಗಾಗಿ ಆಶೀರ್ವಾದ ಮಾಡಿ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಮಳವಳ್ಳಿ ಜನ ಬೆಂಬಲಿಸಬೇಕು. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಬಿಜೆಪಿನ ದೂರ ಇಟ್ಟು ಕುಮಾರಸ್ವಾಮಿ ಗೆ ದರ್ಬಾರ್ ಮಾಡು ಅಂತ ಅಧಿಕಾರ ಕೊಟ್ಟೋ ಆದ್ರೆ ಅವರು ಉಳಿಸಿಕೊಳ್ಳಿಲ್ಲ. ನಿಮ್ಮ ಬದುಕಿನಲ್ಲಿ ಏನಾದ್ರೂ ಬದಲಾವಣೆ ಹಾಗಿದಿಯ? ಮೇ.10 ರಂದು ಮತದಾನದಲ್ಲಿ ನಿಮ್ಮ ಭವಿಷ್ಯನ ನೀವೇ ನಿರ್ಮಾಣ ಮಾಡೋವಂತಹ ದಿನವಾಗಿದೆ ಎಂದರು.

ನಿಮ್ಮಗೆ ಅಚ್ಚೆ ದಿನ ತರ್ತಿವಿ ಅಂದ್ರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದುಷ್ಟ ಆಡಳಿತ ನೀಡುತ್ತಿದೆ. ಮೂರುವರೆ ವರ್ಷ ಒಂದು ಸರ್ಕಾರವನ್ನು ನೋಡಿದ್ದೇವೆ.
ಇಷ್ಟು ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದಿಯೇ ಎಂಬುವುದನ್ನು ಅರಿತುಕೊಳ್ಳಿ ಎಂದು ಹೇಳಿದರು.ಕಾಂಗ್ರೆಸ್ ನೀಡ್ತಿರೋ ಭರವಸೆ ಬೋಗಸ್ ಅಂತ ಬಿಜೆಪಿ ಹೇಳ್ತಿದ್ದಾರೆ. ನೀವು ಕೊಟ್ಟಿರೋ ಘೋಷಣೆ ಎಷ್ಟು ಮಾಡಿದ್ದಾರೆ ಎಂದು ಪ್ರಶ್ನೆ.‌ ಅನ್ನದಾನಿ ನನ್ನ ಸ್ನೇಹಿತ ಚೆನ್ನಾಗಿ ಹಾಡು ಹೇಳ್ತಾನೆ ಅವನು ಹಾಡು ಹೇಳ್ಕೊಂಡೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.ನಿಮ್ಮ ಕೈ ಗೆ ನೀವೆ ಶಕ್ತಿಯನ್ನು ಕೊಡುವಂತ ದಿನ ಬಂದಿದೆ. ನಿಮಗೆ ಅಚ್ಚೆದಿನ ಬರುತ್ತೆ ಎಂದು ಹೇಳಿದ್ರು. ಪ್ರತಿದಿನ ಘಟಾನುಘಟಿ ನಾಯಕರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಸಿಎಂ.ಉಪ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಹಲವರು ಸೇರುತ್ತಿದ್ದಾರೆ. ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಜೆಡಿಎಸ್ ಅವರಿಗಿಂತ ಕಡಿಮೆ ಸ್ಥಾನದಲ್ಲಿ ನಾವು ಇದ್ದೋ, ಆದರೆ ಕಾಂಗ್ರೆಸ್ ಅಭ್ಯರ್ಥಿ ಗೆ ಮತ ಹಾಕುತ್ತಾರೆ.ಎಂದರೇ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಇವತ್ತೆಲ್ಲ ಬಿಜೆಪಿ ತೊರೆದು ಕಾಂಗ್ರೆಸ್ ಬರ್ತಾ ಇದ್ದಾರೆ. 17 ಜನ ಎಂಎಎಲ್ಎ ದಳದವರು ಇದ್ದರು. ವಿದ್ಯಾವಂತರು ತೆಗೆದುಕೊಂಡಂತಹ ನಿರ್ಧಾರ ಮಧು ಮಾದೇಗೌಡರ ಗೆಲುವು. ನೀವೆಲ್ಲ ಬದಲಾವಣೆ ಮಾಡ್ಕೊಳ್ಳೋ ಅಂತ ದಿನ. ಸುಮಾರು 20 ಜನ ಜನತಾದಳವರು ಎಲ್ಲ ಸೇರಿ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದರು. ಇವತ್ತು ನರೇಂದ್ರಸ್ವಾಮಿ ಅಭ್ಯರ್ಥಿ ಏನಾದ್ರೂ ತಪ್ಪು ಮಾಡಿದ್ರೆ ದಯವಿಟ್ಟು ಹೊಟ್ಟೆಗೆ ಹಾಕೊಳ್ಳಿ. ಇವತ್ತು ಕಾಂಗ್ರೆಸ್ ಪಕ್ಷ ಬದುಕಿನ ಬಗ್ಗೆ ಯೋಚ್ನೆ ಮಾಡ್ತಿದೆ. ಇವತ್ತು ಕೊರೋನ ಸಂಧರ್ಭದಲ್ಲಿ ತುಂಬಾ ನೊಂದಿದಿರಿ. ಅವತ್ತು ಕಾಂಗ್ರೆಸ್ ಪಕ್ಷ ಸಹಾಯ ಮಾಡಿದೆ. ಜನತಾದಳದ ನಾಯಕರು ಸಹ ಕೈ ನತ್ತ ನೋಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಮತ್ತಷ್ಟು ಗಟ್ಟಿ ಗಳಿಸಿಬೇಕಿದೆ. ನಾನು ಸಿದರಾಮಯ್ಯ, ಪರಮೇಶ್ವರ್ ಅವರ ಜೊತೆಗೂಡಿ ಪಕ್ಷ ಸಾಕಷ್ಟು ಬಲವರ್ಧನೆಯಾಗಿದೆ ಎಂದು ಹೇಳಿದರು.