ಉತ್ತರ ಕ್ಷೇತ್ರದ ಅಭ್ಯರ್ಥಿ ಇನಾಯತ್‌ಅಲಿ ಚುನಾವಣೆಯಲ್ಲಿ ಗೆದ್ದರೆ ಯಕ್ಷಗಾನ ಸೇವೆ ಮಾಡಿಸುವೆ:ಯಕ್ಷಗಾನ ಕಲಾವಿದ ಶ್ರೀನಿವಾಸ್ ಸಾಲಿಯಾನ್

ಕರಾವಳಿ

ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಗೆದ್ದರೆ ಅವರ ಹೆಸರಿನಲ್ಲಿ ಯಕ್ಷಗಾನ ಸೇವೆ ನೀಡುವುದಾಗಿ ಕಾಂಗ್ರೆಸ್ ಕಾರ್ಯಕರ್ತ ಹಿರಿಯ ಯಕ್ಷಗಾನ ಪ್ರಸಂಗಕರ್ತರಾದ ಬೋಂದೆಲ್ ಕೃಷ್ಣನಗರ ನಿವಾಸಿ ಶ್ರೀನಿವಾಸ್ ಸಾಲಿಯಾನ್ ಹೇಳಿದ್ದಾರೆ.

ಬೋಂದೆಲ್ ಕೃಷ್ಣಾನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಇನಾಯತ್ ಅಲಿ ಅವರು ಪುನೀತ್ ರಾಜ್ ಕುಮಾರ್ ಅವರಂತಹ ನಿಷ್ಕಲ್ಮಶ ಹೃದಯವುಳ್ಳ ಸಮಾಜ ಸೇವಕ. ಯಾವತ್ತೂ ಬಡವರಿಗೆ ನೊಂದವರಿಗೆ ದಾನ ಮಾಡಿದ್ದನ್ನು ಹೇಳಿಕೊಂಡು ಓಡಾಡಿದವರಲ್ಲ. ಅವರು ಈ ಬಾರಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ. ಅವರು ಗೆದ್ದರೆ ಅವರ ಹೆಸರಿನಲ್ಲಿ ಯಕ್ಷಗಾನ ಸೇವೆಯಾಟ ಆಡಿಸುವ ಸಂಕಲ್ಪ ಮಾಡಿದ್ದೇನೆ ಎಂದರು.

ಇನಾಯತ್ ಅಲಿ ಗೆದ್ದರೆ ಬಜ್ಜೆ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳದಿಂದ ಕೃಷ್ಣನಗರದಲ್ಲಿ ಅದ್ಧೂರಿಯಾಗಿ ಯಕ್ಷಗಾನ ಸೇವೆ ನಡೆಸುತ್ತೇನೆ ಎಂದು ಹೇಳಿದ ಅವರು ಬಜ್ಜೆಯ ಅಂಬಿಕಾ ಅನ್ನಪೂರ್ಣೇಶ್ವರಿ ಅನುಗ್ರಹದಿಂದ ಇನಾಯತ್ ಭರ್ಜರಿ ಜಯ ಸಾಧಿಸುವ ವಿಶ್ವಾಸ ನನಗಿದೆ ಎಂದಿದ್ದಾರೆ.