ಕರ್ನಾಟಕ ವಿಧಾನಸಭೆ ಚುನಾವಣೆ. ಅತಂತ್ರ ವಿಧಾನ ಸಬೆಯ ಸುಳಿವು, ಜೆಡಿಎಸ್ ಕಿಂಗ್ ಮೆಕರ್ ಸಾಧ್ಯತೆ.!

ರಾಜ್ಯ

ದೇಶದಾದ್ಯಂತ ಕಾಂಗ್ರೆಸ್‌ಗೆ ಕಾಯಕಲ್ಪ ಸಿಗುವ ಬೆಂಬಲ,ಭರವಸೆ ಇದೆ. ಆದರೆ ಅದು ಕರ್ನಾಟಕ ರಾಜ್ಯದಿಂದಲೇ ಪ್ರಾರಂಭವಾಗಬೇಕು.2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಈ ಬಾರಿಯೂ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.

2013ರಲ್ಲಿ ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದು, ಶೇ 36.6 ರಷ್ಟು ಮತಗಳನ್ನು ಗಳಿಸಿತ್ತು. ಬಿಜೆಪಿಯು 40 ಸ್ಥಾನಗಳನ್ನು ಪಡೆದು ಶೇ 19.9 ಹಾಗು ಜೆಡಿಎಸ್ 40 ಸ್ಥಾನಗಳೊಂದಿಗೆ ಶೇ 20.2 ರಷ್ಟು ಮತ ಪಡೆದು ಗೆದ್ದಿದ್ದವು.2018ರಲ್ಲಿ ಕಾಂಗ್ರೆಸ್‌ ಶೇ 38.14ರಷ್ಟು ಮತಗಳಿದ್ದರೂ 80 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈಗ, ಪಕ್ಷವು ತನ್ನ ಮತ ಪಾಲನ್ನು ಶೇ 42ಕ್ಕೆ ಕೊಂಡೊಯ್ಯಲು ಮತ್ತು 113ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರುವ ಹಂಬಲದಲ್ಲಿದೆ.

ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅದು ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತರನ್ನು ಓಲೈಸಲು ಸಹಾಯ ಮಾಡಬಹುದು. ಈ ಮಧ್ಯೆ, ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ದಲಿತ ಮತ್ತು ಕುರುಬ ಸಮುದಾಯದ ಮತಗಳನ್ನು ಪಕ್ಷಕ್ಕೆ ದೊರಕುವಂತೆ ಮಾಡಬಹುದು. ಅಲ್ಪಸಂಖ್ಯಾತ ಸಮುದಾಯದ ಮತದಾರರಿಂದಲೂ ಬೆಂಬಲ ಪಡೆಯುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.