ಬಂಟ್ವಾಳದಲ್ಲಿ ಸಮರ್ಥ ಜಾತ್ಯತೀತ ನಾಯಕ ರಮಾನಾಥ ರೈ ಪರ ಹೆಚ್ಚಿನ ಮತದಾರರ ಒಲವು

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಪ್ರಬಲ ಪೈಪೋಟಿಯ ಕ್ಷೇತ್ರಗಳಲ್ಲಿ ಒಂದು. ಬಿಜೆಪಿಯ ಹಾಲಿ ಶಾಸಕ ರಾಜೇಶ್ ನಾಯಕ್ ಎದುರಾಳಿಯಾಗಿ ಕಾಂಗ್ರೆಸ್ ನಿಂದ ರಮಾನಾಥ ರೈ ಸ್ಪರ್ಧೆ ಮಾಡುತ್ತಿದ್ದಾರೆ.

ರಮಾನಾಥ ರೈ ಅವರಿಗೆ ಇದು ಒಂಭತ್ತನೇ ಚುನಾವಣೆ. ಎರಡು ಬಾರಿ ಸೋತಿದ್ದರೂ ಆರು ಬಾರಿ ಗೆದ್ದು ಪ್ರಬಲ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದ ಸಮರ್ಥ ನಾಯಕ. ಒಮ್ಮೆ ನಾಗರಾಜ ಶೆಟ್ಟಿಯವರ ಎದುರು ಸೋಲು ಕಂಡಿದ್ದ ರಮಾನಾಥ ರೈ, ಆ ಸಂದರ್ಭದಲ್ಲಿ ಎದ್ದ ಹಿಂದೂ ಸಮಾಜೋತ್ಸವ ಬಿರುಗಾಳಿಗೆ ಜಾತ್ಯತೀತ ನಾಯಕ ಸೋಲು ಕಾಣಬೇಕಾಯಿತು.

ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ರಮಾನಾಥ ರೈ ವಿರುದ್ಧ ಅಪಪ್ರಚಾರದ ಮೂಲಕ ಸೋಲಿಸಲಾಯಿತು ಅನ್ನುವುದು ನೂರಕ್ಕೆ ನೂರು ಸತ್ಯ. ರಮಾನಾಥ ರೈ ಪ್ರತಿ ವೇದಿಕೆಗಳಲ್ಲೂ ತಾನು ಕನಸು ಮನಸ್ಸಿನಲ್ಲಿಯೂ ಅನ್ನದ ರೀತಿಯ ಅಪಪ್ರಚಾರದ ಷಡ್ಯಂತ್ರವನ್ನು ನನ್ನ ವಿರುದ್ಧ ಹೂಡಿದ್ದರು ಎಂದು ಬೇಸರದಿಂದ ಹೇಳುತ್ತಿದ್ದಾರೆ.

ಈ ಬಾರಿಯು ರಮಾನಾಥ ರೈ ಮತ್ತೊಮ್ಮೆ ಸತ್ವ ಪರೀಕ್ಷೆಗೆ ಇಳಿದಿದ್ದಾರೆ. ತಾನು ಮಾಡಿರುವ ಅಭಿವೃದ್ಧಿ ಮುಂದಿಟ್ಟು ಮತ ಕೇಳುತ್ತಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ಸೋತರು ಗೆದ್ದರೂ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ಬಾರಿ ಕ್ಷೇತ್ರದುದ್ದಕ್ಕೂ ರಮಾನಾಥ ರೈ ಪರ ಅನುಕಂಪದ ಮಾತು ಕೇಳಿ ಬರುತ್ತಿದೆ. ಮತದಾರರು ಈ ಬಾರಿ ರಮಾನಾಥ ರೈ ಗೆಲ್ಲಿಸಿ ಸಮರ್ಥ ಜಾತ್ಯತೀತ ನಾಯಕನಿಗೆ ಗೌರವ ನೀಡಲು ಮುಂದಾಗಿದೆ. ರಮಾನಾಥ ರೈ ಪರ ಕ್ಷೇತ್ರದುದ್ದಕ್ಕೂ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ.