ಮೂರು ಮಂದಿ ಪೊಲೀಸರ ವಿರುದ್ಧ ಮಂಗಳೂರಿನ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರೆಂಟ್ ಹೊರಡಿಸಲಾಗಿದೆ.
ಐದನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಈ ಆದೇಶ ಹೊರಡಿಸಿದ್ದು, ಮೂವರು ಮಂದಿ ಪೊಲೀಸರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಮಂಗಳೂರಿನ ಹಣಕಾಸು ಸಂಸ್ಥೆಯಿಂದ ಈಮೂರು ಮಂದಿ ಪೊಲೀಸ್ ಸಿಬ್ಬಂದಿಗಳು ಸಾಲ ಪಡೆದುಕೊಂಡಿದ್ದರು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸುಸ್ತಿದಾರರಾಗಿದ್ದರು.ಈ ಬಗ್ಗೆ ಹಣಕಾಸು ಸಂಸ್ಥೆಗೆ ಪೊಲೀಸ್ ಸಿಬ್ಬಂದಿಗಳು ಚೆಕ್ ನೀಡಿದ್ದರು ಎನ್ನಲಾಗಿದೆ. ಇದೀಗ ಚೆಕ್ ಬೌನ್ಸ್ ಆಗಿದ್ದು, ಹಣಕಾಸು ಸಂಸ್ಥೆ ಈ ಮೂವರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸಿತ್ತು.
ಇದೀಗ ಈ ಮೂವರು ಪೊಲೀಸರ ವಿರುದ್ಧದ ಬಂಧನ ವಾರೆಂಟ್ ಜಾರಿಯಾಗಿದ್ದು, ಮಂಗಳೂರು ಪೊಲೀಸರೇ ಸಹೊದ್ಯೋಗಿಗಳಿಗೆ ವಾರಂಟ್ ಜಾರಿಗೊಳಿಸಬೇಕಾಗಿದೆ.