72 ವರ್ಷದ ವಯೋವೃದ್ದನೊದಿಗೆ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್ ; ಮರ್ಯಾದೆಗೆ ಅಂಜಿ ವೃದ್ದ ಆತ್ಮಹತ್ಯೆ

ರಾಜ್ಯ

ವಿದ್ಯಾರ್ಥಿನಿಯೋರ್ವಳು ವೃದ್ಧನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಅದನ್ನು ರೆಕಾರ್ಡ್​ ಮಾಡಿಕೊಂಡು ವೆಬ್​ಸೈಟ್​ಒಂದಕ್ಕೆ ಅಪ್​ಲೋಡ್​ ಮಾಡಿದ್ದು, ವೃದ್ಧ ಅವಮಾನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವಿಡಿಯೋವೊಂದು ಸೋರಿಕೆಯಾದ ಬೆನ್ನಲ್ಲೇ 72 ವರ್ಷದ ವೃದ್ಧನೊಬ್ಬ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಸ್ಸಾಂನ ಜೊರ್ಹಾತ್ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯನ್ನು ದರ್ಶನಾ ಭಾರಾಲಿ ಎಂದು ಗುರುತಿಸಲಾಗಿದೆ.ಯುವತಿ ವೃದ್ಧನಿಗೆ ನಂಬಿಸಿ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ,ವಿಡಿಯೋ ರೆಕಾರ್ಡ್​ ಮಾಡಿಕೊಂಡು ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿರುವ ಆರೋಪ ಕೇಳಿಬಂದಿದೆ.ಜೋರ್ಹಾತ್​ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೃದ್ಧ ಮತ್ತು ಅವರ ಕುಟುಂಬಕ್ಕೆ ಅಪಾರ ಹಾನಿ ಉಂಟು ಮಾಡಿದೆ.

ವಿಡಿಯೋದಿಂದ ಉಂಟಾದ ಮುಜುಗರ ಮತ್ತು ಅವಮಾನವನ್ನು ಸಹಿಸಲಾಗದ ಸಂತ್ರಸ್ತ ತನ್ನ ಜೀವನವನ್ನು ಕೊನೆಗೊಳಿಸುವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಪಿ ಯುವತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತ ವೃದ್ಧನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸ್ಥಳೀಯ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿದ್ದು, ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.