ದ.ಕ ಬಿಜೆಪಿಗೆ 4, ಕಾಂಗ್ರೆಸ್ 2, ಎರಡು ಕ್ಷೇತ್ರಗಳು ತೀವ್ರ ಪೈಪೋಟಿ ಸಾಧ್ಯತೆ

ರಾಜ್ಯ

ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ.ಇನ್ನು ಎನಿದ್ದರೂ ಅಭ್ಯರ್ಥಿಗಳ ಸೋಲು ಗೆಲ್ಲುವಿನ ಬಗ್ಗೆ ಲೆಕ್ಕಾಚಾರಗಳು.ಇದೇ 13 ರಂದು ಗೆಲುವಿನ ನಗು ಬೀರಲಿದ್ದಾರೆ ಅಭ್ಯರ್ಥಿಗಳು. ದ.ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ 4 ಸ್ಥಾನದಲ್ಲಿ ಬಿಜೆಪಿ, 2 ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವುದು ಬಹುತೇಕ ಖಚಿತ ಎಂದು ಅಂದಾಜಿಸಲಾಗಿದೆ.ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಾನ ಹೋರಾಟವಿದ್ದು, ಎರಡು ಪಕ್ಷಗಳು ಗೆಲ್ಲುವ ಸನಿಹದಲ್ಲಿ ಇದೆ. ಈ ಕಾರಣದಿಂದ ಈ ಕ್ಷೇತ್ರಗಳನ್ನು ಕಠಿಣ ಕ್ಷೇತ್ರವೆಂದು ಗುರುತಿಸಲಾಗಿದೆ.

ಮಂಗಳೂರು ದಕ್ಷಿಣ ಬಿಜೆಪಿಯ ಗೆಲ್ಲುವ ಕ್ಷೇತ್ರ ಎಂದು ಹೇಳಲಾಗುತ್ತಿದೆ.ಜೆ ಆರ್ ಲೋಬೋ ಮತ್ತು ವೇದವ್ಯಾಸ ಕಾಮತರ ನಡುವೆ ಸ್ಪರ್ಧೆ ಇದೆ. ಆದರೆ ವೇದವ್ಯಾಸ ಕಾಮತ್ ಗೆಲ್ಲುವ ಸಾಧ್ಯತೆ ಬಹಳ ಹೆಚ್ಚಾಗಿದೆ.ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಗೆಲ್ಲುವ ಕ್ಷೇತ್ರ ಎಂದು ಹೇಳಲಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹೊಸ ಮುಖ ಇನಾಯತ್ ಆಲಿ ಮತ್ತು ಬಿಜೆಪಿಯ ಅಭ್ಯರ್ಥಿ ಭರತ್ ಶೆಟ್ಟಿ ನಡುವೆ ಪ್ರಬಲ ಸ್ಪರ್ಧೆ ಇದೆ. ಮಾಜಿ ಶಾಸಕ ಮೊಯಿದಿನ್ ‌ಬಾವ ಬಂಡಾಯವೆದ್ದು ಜೆಡಿಎಸ್ ನಿಂದ ಸ್ಪರ್ಧಿಸಿದ್ದು ಅವರು ತೆಗೆದುಕೊಳ್ಳುವ ಮತಗಳು ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಬಹಳ ಹೆಚ್ಚಾಗಿದೆ.ಆಡಳಿತ ವಿರೋಧಿ ಅಲೆ,ಶಾಸಕ ಭರತ್ ಶೆಟ್ಟರ ಬಗ್ಗೆ ಕ್ಷೇತ್ರದಲ್ಲಿ ಅಸಮಾಧಾನವಿದ್ದರೂ ಇಬ್ಬರ ಜಗಳದಲ್ಲಿ ಶೆಟ್ಟರಿಗೆ ಲಾಭವಾಗಲಿದೆ.

ಮೂಡಬಿದಿರೆ ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಉಮಾನಾಥ ಕೋಟ್ಯಾನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಡುವೆ ಪ್ರಬಲ ಸ್ಪರ್ಧೆ ಇದೆ. ಮಿಥುನ್ ರೈ ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಬಲ ಹೆಚ್ಚಾಗುವುದಾದರೂ ಗೆಲ್ಲುವ ಸಾಧ್ಯತೆ ಕಡಿಮೆ.ಬಿಜೆಪಿಯ ಬಲಿಷ್ಠ ಕ್ಷೇತ್ರದಲ್ಲಿ ಒಂದಾದ ಸುಳ್ಯದಲ್ಲಿ ಬಿಜೆಪಿ ಬಹಳ ನಿರಾಯಾಸವಾಗಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ.ಇಲ್ಲಿ ಬಿಜೆಪಿಯಿಂದ ಭಾಗೀರಥಿ ಮುರುಳ್ಯ ಮತ್ತು ಕಾಂಗ್ರೆಸ್ ನಿಂದ ಕೃಷ್ಣಪ್ಪ ಸ್ಪರ್ಧಿಸುತ್ತಿದ್ದಾರೆ.ಭಾಗೀರಥಿ ಮುರುಳ್ಯ ಶಾಸಕರಾಗುವ ಸಾಧ್ಯತೆ ಹೆಚ್ಚಿದೆ

ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಗೆಲ್ಲಲಿದೆ.ಇಲ್ಲಿ ಹಾಲಿ ಶಾಸಕ ಯು ಟಿ ಖಾದರ್ ಮತ್ತು ಬಿಜೆಪಿಯ ಸತೀಶ್ ಕುಂಪಲ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನ ಭದ್ರ ಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಸಾಧ್ಯ ಎಂಬಂತಿದೆ.ಈ ಬಾರಿಯೂ ಚಾಣಾಕ್ಯ ರಾಜಕರಣಿ ಯು.ಟಿ ಖಾದರ್ ಗೆಲ್ಲುವ ಸಾಧ್ಯತೆ ಬಹಳ ಹೆಚ್ಚಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಕ್ಷೇತ್ರದಲ್ಲಿ ಪುತ್ತೂರು ಕೂಡ ಒಂದು ಎಂದು ಹೇಳಲಾಗುತ್ತಿದೆ.ಪುತ್ತೂರಿನಲ್ಲಿ ಸಂಭವಿಸಿರುವ ರಾಜಕೀಯ ಬದಲಾವಣೆಗಳಿಂದ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು.ಇಲ್ಲಿ ಬಿಜೆಪಿಯಿಂದ ಆಶಾ ತಿಮ್ಮಪ್ಪ ಗೌಡ ಮತ್ತು ಕಾಂಗ್ರೆಸ್ ನಿಂದ ಅಶೋಕ್ ಕುಮಾರ್ ರೈ ಸ್ಪರ್ಧಿಸುತ್ತಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಕಟ್ಟರ್ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸುತ್ತಿದ್ದಾರೆ.ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಬಿಜೆಪಿಯ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.

ಬಂಟ್ವಾಳ ಕ್ಚೇತ್ರವನ್ನು ಯಾರು ಗೆಲ್ಲುತ್ತಾರೆ ಎಂದು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯಿಂದ ರಾಜೇಶ್ ನಾಯ್ಕ್ ಕಾಂಗ್ರೆಸ್ ನಿಂದ ರಮಾನಾಥ ರೈ ಸ್ಪರ್ಧಿಸುತ್ತಿದ್ದಾರೆ. ಇಬ್ಬರ ನಡುವೆ ಪ್ರಬಲವಾದ ಪೈಪೋಟಿ ಇದೆ. ಇಬ್ಬರ ನಡುವೆ ಇರುವ ಸ್ಪರ್ಧೆಯಿಂದ ಯಾರೇ ಗೆದ್ದರೂ ಗೆಲುವಿನ ಅಂತರ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಭಂಟರು.ರಾಜೇಶ್ ನಾಯ್ಕ್ ರವರಿಗೆ ಸಂಘಪರಿವಾರದ, ಹಿಂದುತ್ವದ ಅಭಯವಿದ್ದರೆ, ರಮಾನಾಥ ರೈಯವರು ಪಲಗಿದ ಜಾತ್ಯಾತೀತ ಶುದ್ದ ಹಸ್ತದ ರಾಜಕಾರಣಿ.ಅಲ್ಲದೆ ಇದು ಅವರ ಕೊನೆ ಚುನಾವಣೆ.ಇಲ್ಲಿ ಗೆಲುವು ಅಷ್ಟು ಸುಲಭವಲ್ಲ.ಯಾರು ಗೆದ್ದರೂ ಕಡಿಮೆ ಅಂತರದಿಂದ ಗೆಲ್ಲಬಹುದು

ಬೆಳ್ತಂಗಡಿ ಬಿಜೆಪಿಯ ಗೆಲುವು ನಿರಾಯಾಸ ಎಂದು ಹೇಳಲಾಗಿತ್ತು. ಆದರೆ ಬದಲಾದ ರಾಜಕೀಯ ಸಂದರ್ಭದಲ್ಲಿ ಬೆಳ್ತಂಗಡಿಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಹೆಚ್ಚಿದೆ. ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಮ ಮತ್ತು ಬಿಜೆಪಿ ಯಿಂದ ಸ್ಪರ್ಧಿಸುತ್ತಿರುವ ಹರೀಶ್ ಪೂಂಜಾ ನಡುವೆ ಪ್ರಬಲ ಪೈಪೋಟಿ ಇದೆ.ಇಬ್ಬರ ನಡುವೆ ಪ್ರಬಲ ಸ್ಪರ್ಧೆ ಇರುವುದರಿಂದ ಯಾರೇ ಗೆದ್ದರೂ ಗೆಲುವಿನ ಅಂತರ ಬಹಳ ಕಡಿಮೆ ಇರಬಹುದು.