ರಾಜ್ಯಸಭಾ ಸಂಸದ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ವಿರುದ್ಧ ಅಸ್ಸಾಂ ಲೋಕೋಪಯೋಗಿ ಇಲಾಖೆಯ ಅಧ್ಯಕ್ಷ ಅಭಿಜಿತ್ ಶರ್ಮಾ ಒಂದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆಂದು ವರದಿಯಾಗಿದೆ.ಗೊಗೋಯ್ ಅವರ ಆತ್ಮಕಥೆ “ಜಸ್ಟೀಸ್ ಫಾರ್ ದಿ ಜಡ್ಜ್’ ಪುಸ್ತಕ ಬಿಡು ಗಡೆಯಾಗಬೇಕಿತ್ತು. ಆದರೆ ಪುಸ್ತಕದಲ್ಲಿ ತಮ್ಮ ವಿರುದ್ಧ ಗೊಗೋಯ್ ಅವಮಾನಕರವಾದ ಬರಹವನ್ನು ಪ್ರಕಟಿಸಿದ್ದಾರೆ ಎಂದು ಅಭಿಜಿತ್ ಶರ್ಮಾ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ “ಜಸ್ಟಿಸ್ ಪಾರ್ ದಿ ಜಡ್ಜ್“ ಪುಸ್ತಕ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ನಿವೃತ್ತ ನ್ಯಾಯಮೂರ್ತಿ ಗೊಗೋಯ್ ಹಾಗೂ ಪುಸ್ತಕದ ಪ್ರಕಾಶಕರಾದ ರೂಪಾ ಪಬ್ಲಿಕೇಶನ್ಸ್ ಅವರ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದಾರೆ.ದೂರದಾರರಿಗೂ ಹಾಗೂ ಪ್ರತಿವಾದಿಗಳಿಗೂ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.