ನಮ್ಮ ಪಕ್ಷದ ಷರತ್ತುಗಳನ್ನು ಯಾರೇ ಒಪ್ಪಿಕೊಂಡರೂ ಅವರೊಂದಿಗೆ ಮೈತ್ರಿ:ಕುಮಾರ ಸ್ವಾಮಿ

ರಾಜ್ಯ

ಮತಗಟ್ಟೆ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂಬ ಅಂದಾಜಿನ ಪ್ರಕಾರ ನಮ್ಮ ಪಕ್ಷ ಷರತ್ತುಗಳನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೆ ಬೆಂಬಲ ನಾವು ನೀಡುವುದಾಗಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಹುಮತದಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಹಲವು ಸಂಸ್ಥೆಗಳು ಚುನಾವಣೋತ್ತರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಜೆಡಿಎಸ್ ಪಕ್ಷ 50 ಸೀಟುಗಳನ್ನು ಗೆಲ್ಲವ ವಿಶ್ವಾಸ ಇದೆ. ಈ ಸಲ ನಮ್ಮ ಪಕ್ಷದ ಷರತ್ತುಗಳನ್ನು ಯಾರು ಒಪ್ಪಿಕೊಳ್ಳುವರೋ ಅ ಪಕ್ಷದ ಜತೆ ಹೋಗುತ್ತೇವೆ ಕುಮಾರ ಸ್ವಾಮಿ ಹೇಳಿದ್ದಾರೆ.

2006ರಲ್ಲಿ ಬಿಜೆಪಿ ಜೊತೆ,2018ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ರಚನೆ ಮಾಡಿದಾಗ ಇದ್ದ ಹಾಗೆ ಸಮನ್ವಯ ಸಮಿತಿ ಈ ಬಾರಿ ಇರಬಾರದು. ಚರ್ಚೆ ಮಾಡದೆ ಯಾವುದೇ ವೈಚಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಎಚ್.ಡಿ ಕುಮಾರಸ್ವಾಮಿಯವರ ಷರತ್ತು.ಸರ್ಕಾರ ನಡೆಸಲು ಮುಖ್ಯಮಂತ್ರಿಗೆ ಮುಕ್ತ ಅವಕಾಶ ನೀಡಬೇಕು.ನೀರಾವರಿ,ಇಂಧನ,ಲೋಕೋಪಯೋಗಿಯಂತಹ ಖಾತೆಗಳನ್ನು ತಮಗೆ ನೀಡಬೇಕು ಎಂದು ಕುಮಾರಸ್ವಾಮಿಯವರ ಷರತ್ತು.ಮೂಲಗಳ ಪ್ರಕಾರ ಜೆಡಿಎಸ್ ವರಿಷ್ಠರಾದ ದೇವೇಗೌಡರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧ ಇದ್ದು, ಮೈತ್ರಿ ಸಂಬಂಧ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.