ಒಂದೇ ಕುಟುಂಬದ ನಾಲ್ವರು ಸೋದರ-ಸೋದರಿಯರು IAS-IPS ಅಧಿಕಾರಿಗಳು

ರಾಷ್ಟ್ರೀಯ

ಈ ಸೂಪರ್ ಫ್ಯಾಮಿಲಿ ಇರುವುದು ಉತ್ತರ ಪ್ರದೇಶದಲ್ಲಿ. ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದು,ತಂದೆ-ತಾಯಿಗೆ ಹೆಮ್ಮೆ ತಂದಿದ್ದಾರೆ.ನಾಲ್ವರು ಒಡಹುಟ್ಟಿದ ಸಹೋದರ, ಸಹೋದರಿಯರು IAS,IPS ಆಗಿರುವ ಕುಟುಂಬ ಇದು.

ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ವಾಸವಾಗಿರುವ ಅನಿಲ್ ಮಿಶ್ರಾರವರ ಕುಟುಂಬವಿದು. ಇದರ ಮುಖ್ಯಸ್ಥ ಅನಿಲ್ ಮಿಶ್ರಾ ಅವರು ತಮ್ಮ ಪತ್ನಿ,ಮಕ್ಕಳೊಂದಿಗೆ ಎರಡು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದರು.ಅವರಿಗೆ ನಾಲ್ಕು ಮಕ್ಕಳು.ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು.ಯೋಗೇಶ್, ಮಾಧವಿ, ಚಾಮ ಮತ್ತು ಅನಿಲ್ ಮಿಶ್ರಾ. ನಾಲ್ವರು ಮಕ್ಕಳೂ ಬೆಳೆದು ಅಧಿಕಾರಿಗಳಾಗಲಿ, ಹೆಸರು ಮಾಡಲಿ ಎಂಬುವುದು ಹೆತ್ತವರ ಆಸೆಯಾಗಿತ್ತು.ಅದಕ್ಕಾಗಿಯೇ ಅವರು ಮೊದಲಿನಿಂದಲೂ ಮಕ್ಕಳಿಗೆ ತುಂಬಾ ಕಷ್ಟಪಟ್ಟು ಕಲಿಸಿದರು. ಮಕ್ಕಳೂ ಅಧ್ಯಯನದಲ್ಲಿ ಬುದ್ಧಿವಂತರಾಗಿದ್ದರು.

ಮೊತ್ತ ಮೊದಲು ಹಿರಿಯ ಮಗ ಯೋಗೇಶ್ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು ಇದಾದ ನಂತರ ನಿಧಾನವಾಗಿ ಎಲ್ಲರೂ ಅಣ್ಣನ ಹಾದಿ ಹಿಡಿಯುವುದೇ ಸರಿ ಎಂದುಕೊಂಡು ತಯಾರಿ ಆರಂಭಿಸಿದರು. ಯೋಗೇಶ್ ಮೊದಲು ಆಯ್ಕೆಯಾದರು.2013ರಲ್ಲಿ ಐಎಎಸ್ ಪಾಸು ಮಾಡಿದರು. ಇದಾದ ನಂತರ ಉಳಿದ ಮೂವರು ಮತ್ತಷ್ಟು ಶ್ರಮವಹಿಸಿ ತಯಾರಿ ಆರಂಭಿಸಿದರು.ಮುಂದಿನ ವರ್ಷ ಅಂದರೆ 2014ರಲ್ಲಿ ಮಾಧವಿ ಆಯ್ಕೆಯಾದರು. ಅವರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತದಲ್ಲಿ 62ನೇ ರಾಂಕ್ ಬಂದಿದೆ. ಯೋಗೇಶ್ ನಂತರ ಮಾಧವಿ ಎರಡನೇ ಸ್ಥಾನದಲ್ಲಿದ್ದಾರೆ.

ಇದಾದ ನಂತರ ಉಳಿದ ಮೂವರು ಮತ್ತಷ್ಟು ಶ್ರಮವಹಿಸಿ ತಯಾರಿ ಆರಂಭಿಸಿದರು.ನಂತರ ಮತ್ತೊಬ್ಬ ಸಹೋದರ ಲೋಕೇಶ್ 2015ರಲ್ಲಿ 44ನೇ ರಾಂಕ್ ಪಡೆದು ಐಎಎಸ್ ಆದರು. ಲೋಕೇಶ್ ದೆಹಲಿಯ ಐಐಟಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಲೋಕೇಶ್ ಅವರು ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಇಟ್ಟುಕೊಂಡಿದ್ದರು. ಅದು ಅವರ ಸಹೋದರ ಯೋಗೇಶ್ ಅವರ ವಿಷಯವೂ ಆಗಿತ್ತು.

ನಾಲ್ವರು ಒಡಹುಟ್ಟಿದವರಲ್ಲಿ ಕಿರಿಯವರಾದ ಕ್ಷಮಾ ಮಿಶ್ರಾ ಅವರು 2015 ರಲ್ಲಿ ಯುಪಿಎಸ್ ಸಿಯನ್ನು ಪಾಸ್ ಮಾಡಿದರು. 172ನೇ ರಾಂಕ್ ಪಡೆದು ಐಪಿಎಸ್ ಆಗಿದ್ದಾರೆ. ಮೂರು ವರ್ಷಗಳಲ್ಲಿ ಎಲ್ಲಾ ನಾಲ್ಕು ಸಹೋದರರು ಮತ್ತು ಸಹೋದರಿಯರು IAS-IPS ಆಗಿದ್ದಾರೆ.