ನಿಂಕುಜ್ ಕಮಾರ್ ಪಾಟೀಲ್ ಎಂಬ ವ್ಯಕ್ತಿ ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿ,ದೈಹಿಕವಾಗಿ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಯು ಅಕ್ರಮ ಸಂಬಂಧ ಹೊಂದಿದ ಮಹಿಳೆಯ ಖಾಸಗಿ ಅಂಗಕ್ಕೆ ಮೆಣಸಿನಕಾಯಿಯನ್ನು ತುಂಬಿ ದುಷ್ಟ ಕೃತ್ಯವೆಸಗಿ ಅನಾಗರೀಕತೆ ಮೆರೆದಿದ್ದಾನೆ. ಇದೀಗ ಆಕೆ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಸೇರಿದ್ದಾಳೆ.
ನಿಕುಂಜ್ ಕುಮಾರ್ ಪಟೇಲ್ ಎಂಬ ವ್ಯಕ್ತಿ ವಿವಾಹಿತನಾಗಿದ್ದು ಪತ್ನಿ ಬೇರೆಡೆ ವಾಸವಾಗಿದ್ದಳು. ಆದರೆ ಈತ ತನ್ನ ಪತ್ನಿ ಬೇರೆ ಗ್ರಾಮದಲ್ಲಿ ವಾಸಿಸುತ್ತಿರುವ ವಿಷಯವನ್ನು ಮುಚ್ಚಿಟ್ಟಿು,ಬೇರೆ ಮಹಿಳೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಆಮಿಷವೊಡ್ಡಿ,ಆಕೆಯೊಂದಿಗೆ ಸಂಬಂಧ ಬೆಳೆಸಿದ್ದಾನೆ.ಆತನ ವೈವಾಹಿಕ ಜೀವನದ ಬಗ್ಗೆ ಗೆಳತಿಗೆ ತಿಳಿದಾಗ, ದಂಪತಿಗಳು ಜಗಳವಾಡಿದ್ದಾರೆ. ಮಹಿಳೆ ಪಟೇಲ್‌ನಿಂದ ದೂರವಿರಲು ನಿರ್ಧರಿಸಿದ್ದಾಳೆ.
ಆಕೆಯ ನಿರ್ಧಾರದಿಂದ ಕೋಪಗೊಂಡ ಪಟೇಲ್ ಆಕೆಯನ್ನು ವೈರ್‌ನಿಂದ ಹೊಡೆದು ಅತ್ಯಾಚಾರವೆಸಗಿದ್ದಾನೆ. ಆಕೆಯ ಖಾಸಗಿ ಭಾಗಗಳಲ್ಲಿ ಮೆಣಸಿನಕಾಯಿಯನ್ನು ತುಂಬಿ, ಹಲ್ಲೆ ನಡೆಸಿರುತ್ತಾನೆ. ನಂತರ ಆಕೆಯ ವಿವಿದ ಭಂಗಿಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಗಂಭೀರ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಯ ವಿರುದ್ದ ಓಲಪಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.