ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಜೊತೆಗೆ ಎಂಟು ಮಂದಿ ಶಾಸಕರೂ ಪ್ರಮಾಣ ವಚನ

ರಾಜ್ಯ

ಇಂದು ಮಧ್ಯಾಹ್ನ 12:30 ಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ಎಂಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಂಟು ಜನ ಸಚಿವರು ಅಂತಿಮ ಎನ್ನಲಾದ ಪಟ್ಟಿಯೊಂದು ಹೊರಬಿದ್ದಿದೆ.

ಶುಕ್ರವಾರ ದೆಹಲಿಯಲ್ಲಿ ತಡರಾತ್ರಿವರೆಗೂ ವೇಣುಗೋಪಾಲ್ ಮನೆಯಲ್ಲಿ ಚರ್ಚೆ ನಡೆದರೂ ಸಚಿವ ಪಟ್ಟಿ ಇನ್ನೂ ಅಂತಿಮ ಆಗಿಲ್ಲ. ಇಬ್ಬರು ನಾಯಕರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮಗೊಂಡಿಲ್ಲ ಎನ್ನಲಾಗಿದೆ. ದೆಹಲಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿಯಾಗಿ ತೆರಳಿದರೂ, ಬರುವಾಗ ಒಂಟಿಯಾಗಿ ಬಂದಿದ್ದಾರೆ.

ಆರಂಭದಲ್ಲಿ 25 ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ನಿರ್ಧರಿಸಲಾಗಿತ್ತು. ಆದರೆ, ಉಭಯ ನಾಯಕರ ನಡುವೆ ಒಮ್ಮತ ಮೂಡದ ಹಿನ್ನಲೆ, ಮೊದಲ ಹಂತದಲ್ಲಿ ಎಂಟು ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಹೇಳಲಾಗುತ್ತಿದೆ. ಎಂಟು ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್‌ ಆಗಿದ್ದು, ಜಿ ಪರಮೇಶ್ವರ್, ಎಚ್ ಮುನಿಯಪ್ಪ, ಕೆ.ಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ ಹಾಗೂ ಜಮೀರ್ ಆಹ್ಮದ್ ಖಾನ್ ಹೆಸರು ಅಂತಿಮವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಈ ಎಂಟು ಮಂದಿ ಶಾಸಕರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.