“ಅನೈತಿಕ ಪೊಲೀಸ್ ಗಿರಿ ಗೆ ಅವಕಾಶ ಇಲ್ಲ, ಪೊಲೀಸರು ಸರಿಯಾಗಿ ನಡೆದುಕೊಳ್ಳಬೇಕು” ಎಂಬ ಕಾಂಗ್ರೆಸ್ ಸರಕಾರದ ಹೇಳಿಕೆ ಸ್ವಾಗತಾರ್ಹ. ನಿಮ್ಮ ಮಾತಿನ ಮೇಲೆ ನಂಬಿಕೆ ಬರಬೇಕಾದರೆ ಮೊದಲು ನಟೋರಿಯಸ್ ಪುನೀತ್ ಕೆರೆಹಳ್ಳಿ ತಂಡದ ಜಾಮೀನು ರದ್ದುಗೊಳಿಸಿ ಮರಳಿ ಜೈಲಿಗೆ ಕಳುಹಿಸುವಂತೆ ಮಾಡಿ.
ಕರಾವಳಿಯ ಅನೈತಿಕ ಪೊಲೀಸ್ ಗಿರಿಯನ್ನು ದಕ್ಷಿಣ ಕರ್ನಾಟಕಕ್ಕೆ ವಿಸ್ತರಿಸಲು ಬಳಕೆಯಾಗಿದ್ದು ಇದೇ ಪುನೀತ್ ಕೆರೆಹಳ್ಳಿ ನೇತೃತ್ವದ ಅನೈತಿಕ ಗೂಂಡಾ ಪಡೆ. ಮಂಡ್ಯದ ಇದ್ರಿಸ್ ಪಾಷಾ ಎಂಬ ಅಮಾಯಕನನ್ನು ಸಾತನೂರು ಬಳಿ “ಗುಂಪು ಹಲ್ಲೆ” ನಡೆಸಿ ಕೊಲೆಗೈದ ಪ್ರಕರಣದಲ್ಲಿ ಈ ಗ್ಯಾಂಗ್ ಗೆ ನಲವತ್ತೈದು ದಿನಗಳಲ್ಲೆ ಜಾಮೀನು ದೊರಕಿದೆ. ರಾಮ ನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಹಿತ ಬಿಜೆಪಿ ಪರಿವಾರದ ಆಜ್ಞಾನುಧಾರಿ ಪೊಲೀಸರ ಪಕ್ಷಪಾತಿ, ಕೋಮುವಾದಿ ಮನೋಧರ್ಮದ ನಡೆಯಿದಷ್ಟೇ ಕೊಲೆ ಪ್ರಕರಣದಲ್ಲಿ ಈ ರೀತಿ ಜಾಮೀನು ದೊರಕಲು ಸಾಧ್ಯ.
ಇದ್ರಿಸ್ ಪಾಷಾ ಕೊಲೆ ಪ್ರಕರಣದ ಮರು ತನಿಖೆ ನಡೆಸಿ, ಮತೀಯ ತಾರತಮ್ಯ, ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಅದು ಸರಿಯಾದ ನಡೆ. ಆಗ ಅಲ್ಪಸಂಖ್ಯಾತ ಸಮುದಾಯಗಳಿಗೆ ನಿಮ್ಮ ಸರಕಾರದ ಮಾತಿನ ಮೇಲೆ ನಂಬಿಕೆ ಹುಟ್ಟುತ್ತದೆ.