ಎಂಟು ಬ್ಯಾಂಕುಗಳ ಪರವಾನಿಗೆ ರದ್ದು, ಎಲ್ಲಾ ರೀತಿಯ ವ್ಯವಹಾರ ನಿಷೇಧ:ಆರ್ ಬಿ ಐ

ರಾಷ್ಟ್ರೀಯ

2022-23 ರ ಆರ್ಥಿಕ ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ. ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಲಾಗಿದೆ. ಆದರೆ ಈ ಬ್ಯಾಂಕ್‌ಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಕಠಿಣ ಕ್ರಮಗಳನ್ನು ಕೈಗೊಂಡಿದೆ.ದ್ವಂದ್ವ ನಿಯಮ ಮತ್ತು ದುರ್ಬಲ ಹಣಕಾಸು ನೀತಿಯನ್ನು ಈ ಸಹಕಾರಿ ಬ್ಯಾಂಕ್ ಗಳು ಅನುಸರಿಸುತ್ತಿತ್ತು, ಮಾತ್ರವಲ್ಲದೆ ಸ್ಥಳೀಯ ಮುಖಂಡರು ಈ ಸಹಕಾರಿ ಬ್ಯಾಂಕ್‌ಗಳ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸಹಕಾರಿ ಬ್ಯಾಂಕ್ ಗಳ ವಿರುದ್ಧ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಎಂಟು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ.

ಪರವಾನಿಗೆ ರದ್ದು ಮಾಡಲಾದ ಬ್ಯಾಂಕುಗಳು.ಮುಧೋಳ ಸಹಕಾರಿ ಬ್ಯಾಂಕ್,ಮಿಲತ್ ಸಹಕಾರಿ ಬ್ಯಾಂಕ್,ಶ್ರೀ ಆನಂದ ಸಹಕಾರಿ ಬ್ಯಾಂಕ್,ರೂಪಾಯಿ ಸಹಕಾರಿ ಬ್ಯಾಂಕ್,ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್,ಲಕ್ಷ್ಮಿ ಸಹಕಾರಿ ಬ್ಯಾಂಕ್ ಬ್ಯಾಂಕ್,ಸೇವಾ ವಿಕಾಸ್ ಕೋ-ಆಪರೇಟಿವ್ ಬ್ಯಾಂಕ್,ಬಾಬಾಜಿ ಮಹಿಳಾ ಅರ್ಬನ್ ಬ್ಯಾಂಕ್.ಈ ಬ್ಯಾಂಕ್ ಗಳು ಬ್ಯಾಂಕಿಂಗ್ ನಿಯಂತ್ರಣದ ನಿಯಮಗಳನ್ನು ಪಾಲಿಸದ ಕಾರಣ ಆರ್ ಬಿ ಐ ಈ ಮೇಲಿನ ಬ್ಯಾಂಕ್‌ಗಳ ಪರವಾನಗಿ ರದ್ದು ಮಾಡಿದೆ.ಕಳೆದ ಹಲವು ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆರ್‌ಬಿಐ ನಿಗಾ ಇಟ್ಟಿದೆ. ಕೇಂದ್ರೀಯ ಬ್ಯಾಂಕ್ 2021-22ರಲ್ಲಿ 12 ಸಹಕಾರಿ ಬ್ಯಾಂಕ್‌ಗಳು, 2020-21ರಲ್ಲಿ 3 ಸಹಕಾರಿ ಬ್ಯಾಂಕ್‌ಗಳು ಮತ್ತು 2019-20ರಲ್ಲಿ ಎರಡು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಿತ್ತು.